ರೆಬಲ್‍ಸ್ಟಾರ್ ಅಂಬರೀಷ್ ನಿಧನದ ನಂತರ ಅಮರ್ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿತ್ತು. ನೋವಿನಲ್ಲಿಯೇ ಇದ್ದ ಅಭಿಷೇಕ್, ಈಗ ಮತ್ತೆ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ. ಅಂಬರೀಷ್ ಫೋಟೋ ಹಿಡಿದುಕೊಂಡೇ ಚಿತ್ರೀಕರಣಕ್ಕೆ ತೆರಳಿರುವ ಅಭಿಷೇಕ್, ಇದೆಲ್ಲವನ್ನೂ ಅಪ್ಪ ನೋಡುತ್ತಿದ್ದಾರೆ. ಮತ್ತೆ ಕೆಲಸಕ್ಕೆ ತೆರಳುತ್ತಿದ್ದೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ವಿಶೇಷವೆಂದರೆ, ಅಂಬರೀಷ್ ಅವರಿಗೂ ಇದೇ ರೀತಿಯ ಅನುಭವವಾಗಿತ್ತು. ಅಂಬರೀಷ್ ಅವರಿಗೆ ಅವರ ತಂದೆಯ ಸಾವು ಅನಿರೀಕ್ಷಿತ ಆಘಾತವಾಗಿತ್ತು. ತಂದೆಯ ಸಂಸ್ಕಾರಕ್ಕೆ ಚಿತ್ರೀಕರಣವನ್ನು ಅರ್ಧಕ್ಕೇ ನಿಲ್ಲಿಸಿ ಹೋಗಿದ್ದರು ಅಂಬಿ. ತಂದೆಯ ಸಂಸ್ಕಾರ ಮುಗಿಸಿ, ಅದೇ ನೋವಿನಲ್ಲಿದ್ದ ಅಂಬರೀಷ್‍ಗೆ ಅವರ ತಾಯಿ ಶೂಟಿಂಗ್‍ಗೆ ಹೋಗುವಂತೆ ಹೇಳಿದ್ದರಂತೆ. ಎಷ್ಟು ಅತ್ತರೂ ನಿಮ್ಮ ತಂದೆ ವಾಪಸ್ ಬರಲ್ಲ. ನಾವು ನೋವಿನಲ್ಲಿದ್ದೇವೆಂದು ನಮ್ಮನ್ನು ನಂಬಿದ ನಿರ್ಮಾಪಕರಿಗೆ ಕಷ್ಟವಾಗಬಾರದು ಎಂದಿದ್ದರಂತೆ ಅಂಬರೀಷ್ ತಾಯಿ.
ಅಂದು ಅಂಬರೀಷ್ ಅನುಭವಿಸಿದ ಅದೇ ಕ್ಷಣ, ಈಗ ಅಭಿಷೇಕ್ ಅವರಿಗೂ ಎದುರಾಗಿದೆ.