ಕೆಜಿಎಫ್ ಸಿನಿಮಾ ಡಿಸೆಂಬರ್ 21ಕ್ಕೆ ರಿಲೀಸ್ ಆಗುತ್ತಿರುವುದು ಈಗ ಸ್ಯಾಂಡಲ್‍ವುಡ್ ಸೆನ್ಸೇಷನ್. ಕೆಜಿಎಫ್‍ನ್ನು ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುವಂತೆ ಮಾಡಿರುವುದೇ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದೆ.
ಅಂದಹಾಗೆ ಆ ದಿನ ಯಶ್ ಎದುರಿಗೆ ಬರುತ್ತಿರುವ ಅತಿದೊಡ್ಡ ಸಿನಿಮಾ ಝೀರೋ. ಶಾರೂಕ್ ಖಾನ್, ಅನೂಷ್ಕಾ ಶರ್ಮಾ, ಕತ್ರಿನಾ ಕೈಫ್ ಅಭಿನಯದ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ನಟನಾಗಿ ನಟಿಸಿದ್ದಾರೆ.
ಯಶ್‍ಗೆ ಶಾರೂಕ್ ಒಬ್ಬರೇ ಅಲ್ಲ, ಅದೇ ದಿನ ತಮಿಳಿನಲ್ಲಿ ವಿಜಯ್ ಸೇತುಪತಿ ಅಭಿನಯದ ಸೀತಾಕತ್ತಿ ರಿಲೀಸ್ ಆಗುತ್ತಿದೆ. ತಮಿಳಿನಲ್ಲಿ ಸತತ ಹಿಟ್ ಚಿತ್ರಗಳನ್ನೇ ನೀಡುತ್ತಿರುವ ಸ್ಪೆಷಲ್ ಹೀರೋ ವಿಜಯ್ ಸೇತುಪತಿ. ಅದರ ಜೊತೆಗೆ ಧನುಷ್ ಅಭಿನಯದ ಮಾರಿ 2 ಕೂಡಾ ರಿಲೀಸ್ ಆಗುತ್ತಿದೆ.
ಇನ್ನು ಹಾಲಿವುಡ್‍ನ ಅಕ್ವಾಮ್ಯಾನ್, ಅಲಿಟಾ, ಬ್ಯಾಟ್ಲ್ ಏಂಜಲ್ ಮತ್ತು ಬಂಬಲ್ ಬೀ ಚಿತ್ರಗಳು ರಿಲೀಸ್ ಆಗುತ್ತಿವೆ. ಪ್ರತಿ ಸಿನಿಮಾನೂ ಸೆನ್ಸೇಷನ್ ಸೃಷ್ಟಿಸಿರುವಂತಹ ಚಿತ್ರಗಳೇ.
ಅದೇ ದಿನ ಮಲಯಾಳಂನಲ್ಲಿ ಮಮ್ಮೂಟ್ಟಿ ಅಭಿನಯದ ಯಾತ್ರಾ ರಿಲೀಸ್ ಆಗಲಿದೆ. ನಯನತಾರಾ ಅಭಿನಯದ ಐರಾ, ನಿತ್ಯಾ ಮೆನನ್ ಅಭಿನಯದ ಪ್ರಾಣ, ಕಾರ್ತಿ ಅಭಿನಯದ ದೇವಾ ಚಿತ್ರಗಳು ರಿಲೀಸ್ ಆಗುತ್ತಿವೆ.
ಒಟ್ಟಿನಲ್ಲಿ ಕೆಜಿಎಫ್‍ಗೆ ಚಾಲೆಂಜ್‍ಗಳು ತುಂಬಾನೇ ಇವೆ.