Print 
darshan,

User Rating: 5 / 5

Star activeStar activeStar activeStar activeStar active
 
darshan donates 12 lakhs to daily wage workers
Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಷ್ಟದಲ್ಲಿರೋರು ಕಂಡರೆ ನೆರವಾಗುತ್ತಾರೆ. ಅದು ಹೊಸದೇನೂ ಅಲ್ಲ. ಸಹಾಯ  ಮಾಡಿದ್ದು ಇನ್ನೊಬ್ಬರಿಗೆ ಗೊತ್ತೇ ಆಗದಂತೆ ನೋಡಿಕೊಳ್ಳೋದು ದರ್ಶನ್ ಸ್ಪೆಷಾಲಿಟಿ. ಈ ಬಾರಿಯೂ ಅಷ್ಟೆ, ಅವರು ಸಹಾಯ ಮಾಡಿದ ಹಲವು ದಿನಗಳ ನಂತರ ಸುದ್ದಿ ಹೊರಬಿದ್ದಿದೆ.

ದರ್ಶನ್, ಅರಣ್ಯ ಇಲಾಖೆಯ ರಾಯಭಾರಿಯಾಗಿರುವುದು ಗೊತ್ತಿದೆ ತಾನೇ. ಅದರ ಸಲುವಾಗಿಯೇ ದರ್ಶನ್, ಇತ್ತೀಚೆಗೆ ಚಾಮರಾಜನಗರದ ಕಾಡಿಗೆ ಭೇಟಿ ಕೊಟ್ಟಿದ್ದರು. ಆಗ ಅರಣ್ಯ ಇಲಾಖೆಯ ದಿನಗೂಲಿ ನೌಕರರ ಕಷ್ಟ ಗೊತ್ತಾಯ್ತು. ನಂತರ ಸೀದಾ ಇಲಾಖೆಗೆ ಹೋಗಿ 12 ಲಕ್ಷ ರೂ. ಹಣವನ್ನು ಅರಣ್ಯ ಇಲಾಖೆ ನೌಕರರ ಸಂಘದ ಹೆಸರಲ್ಲಿ ಡೆಪಾಸಿಟ್ ಇಟ್ಟಿದ್ದಾರೆ ದರ್ಶನ್. ಇನ್ನು ಮುಂದೆ ಪ್ರತೀ ತಿಂಗಳೂ ಆ 12 ಲಕ್ಷ ರೂ. ಹಣದ ಬಡ್ಡಿ, ನೌಕರರಿಗೆ ಹಂಚಿಕೆಯಾಗಲಿದೆ.