` ರಾಮು ಬ್ಯಾನರ್ ಅಂದ್ರೆ ಸ್ಯಾಂಡಲ್‍ವುಡ್ ತೆಂಡೂಲ್ಕರ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramu banner has special records
D Ramu

ಸಚಿನ್ ತೆಂಡೂಲ್ಕರ್ ಹೆಸರು ಕೇಳಿದ್ರೆ ಸಾಕು, ಕ್ರಿಕೆಟ್‍ನಲ್ಲಿ ಅದೆಷ್ಟೋ ದಾಖಲೆಗಳು ಕಣ್ಣ ಮುಂದೆ ಡ್ಯಾನ್ಸ್ ಮಾಡುತ್ವೆ. ಕೆಲವು ಹೆಸರುಗಳೇ ಹಾಗೆ.. ಸ್ಯಾಂಡಲ್‍ವುಡ್‍ನಲ್ಲಿ ರಾಮು ಬ್ಯಾನರ್ ಹಾಗೆಯೇ ಆಗಿಬಿಟ್ಟಿದೆ.

ಕನ್ನಡದಲ್ಲಿ ಒಂದು ಕಾಲದಲ್ಲಿ ಕೋಟಿ ನಿರ್ಮಾಪಕ ಎಂದೇ ಹೆಸರಾಗಿದ್ದ ರಾಮು, ಈಗ 99 ಚಿತ್ರ ಮಾಡುತ್ತಿದ್ದಾರೆ. ಆ ಚಿತ್ರ ಅರ್ಜುನ್ ಜನ್ಯ ಸಂಗೀತ ನಿರ್ದೇಶನದ 100ನೇ ಸಿನಿಮಾ.

ಇನ್ನು ಇದೇ ಬ್ಯಾನರ್‍ನಲ್ಲಿ ಶಿವಣ್ಣ 50ನೇ ಚಿತ್ರ ಎ.ಕೆ.47 ಆಗಿತ್ತು. ಅದು ಇನ್ನೊಂದು ದಾಖಲೆ.

ನಾದಬ್ರಹ್ಮ ಹಂಸಲೇಖ ಅವರ 200ನೇ ಚಿತ್ರ ನಂಜುಂಡಿ ಚಿತ್ರ ನಿರ್ಮಾಣವಾಗಿದ್ದುದು ಕೂಡಾ ರಾಮು ಬ್ಯಾನರ್‍ನಲ್ಲೇ.

ಇದೆಲ್ಲವನ್ನೂ ನೆನಪಿಸಿರೋದು ಗೋಲ್ಡನ್ ಸ್ಟಾರ್ ಗಣೇಶ್. ರಾಮು ಬ್ಯಾನರ್‍ನ ದಾಖಲೆಯ ಸಿನಿಮಾ 99 ಚಿತ್ರದ ಹೀರೋ. ಅಂದಹಾಗೆ, ರಾಮು ಬ್ಯಾನರ್‍ನಲ್ಲಿ ಗಣೇಶ್‍ಗೆ ಇದು ಮೊದಲನೇ ಸಿನಿಮಾ.

Ayushmanbhava Movie Gallery

Ellidhe Illitanaka Movie Gallery