ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್‍ನ್ನು ತಮಿಳುನಾಡಿನಲ್ಲಿ ರಿಲೀಸ್ ಮಾಡಲು ಮುಂದೆ ಬಂದಿರೋದು ತಮಿಳು ಕಲಾವಿದರ ಸಂಘದ ಅಧ್ಯಕ್ಷರೂ ಆಗಿರುವ ವಿಶಾಲ್. ಅವರು ಟಾಲಿವುಡ್‍ನ ಸ್ಟಾರ್ ನಟರೂ ಹೌದು. ನಿರ್ಮಾಪಕರೂ ಹೌದು, ವಿತರಕರೂ ಹೌದು. ಇಷ್ಟಿದ್ದರೂ ಕನ್ನಡ ಚಿತ್ರ ಕೆಜಿಎಫ್ ರಿಲೀಸ್‍ಗೆ ಮುಂದೆ ನಿಲ್ಲೊದಕ್ಕೆ ಕಾರಣವೂ ಇದೆ.
ನಿಮಗೆ ಚೆನ್ನೈನಲ್ಲಿ ಕಳೆದ ವರ್ಷ ಸಂಭವಿಸಿದ್ದ ಪ್ರಕೃತಿ ವಿಕೋಪ ನೆನಪಿದೆ ತಾನೇ..ಆಗ ಇಡೀ ಚಿತ್ರರಂಗ ಚೆನ್ನೈ ಜನತೆಯ ನೆರವಿಗೆ ಧಾವಿಸಿತ್ತು. ಕರ್ನಾಟಕದಿಂದಲೂ ನೆರವು ಹೋಗಿತ್ತು. ಆಗ ಚೆನ್ನೈಗೆ, ಕರ್ನಾಟಕದಿಂದ ತಲುಪಿದ ಮೊದಲ ನೆರವಿನ ಟ್ರಕ್ ಯಶ್ ಅವರದ್ದಂತೆ. ಆ ಪ್ರೀತಿಗಾಗಿ ಕೆಜಿಎಫ್ ಚಿತ್ರದ ಬಿಡುಗಡೆಗೆ ನಿಂತಿದ್ದೇನೆ ಎಂದಿದ್ದಾರೆ ವಿಶಾಲ್.
ಒಂದು ನೆರವು.. ಒಂದು ಸಹಾಯ.. ಒಂದು ಅಂತಃಕರಣ.. ಹೇಗೆಲ್ಲ ಗೆಳೆಯರನ್ನು ಸಂಪಾದನೆ ಮಾಡಿಕೊಡುತ್ತೆ.. ಅಲ್ವಾ..?