` ಜನವರಿಗೆ ಬರ್ತಾನಾ ಯಜಮಾನ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
will yajamana release in january ?
Darshan Image from Yajamana

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಶೂಟಿಂಗ್ ಮತ್ತೆ ಬಿರುಸಿನಿಂದಲೇ ಶುರುವಾಗಿದೆ. ದರ್ಶನ್‍ಗೆ ಆದ ಆ್ಯಕ್ಸಿಡೆಂಟ್ ಮತ್ತು ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಅನಿರೀಕ್ಷಿತ ಬ್ರೇಕ್ ಎದುರಿಸಿದ್ದ ಯಜಮಾನ ಚಿತ್ರದ ಹಾಡುಗಳ ಶೂಟಿಂಗ್ ಶುರುವಾಗಿದೆ. ಕೆಲವೇ ದಿನಗಳಲ್ಲಿ ಮುಗಿಯಲಿದೆ.

ಶೂಟಿಂಗ್ ಮುಗಿಯಿತು ಎಂದರೆ ಸಿನಿಮಾ ರೆಡಿ ಎಂದು ಅರ್ಥವಲ್ಲ. ಚಿತ್ರದ ಗ್ರಾಫಿಕ್ಸ್ ಕೆಲಸಗಳು, ಎಡಿಟಂಗ್, ಡಬ್ಬಿಂಗ್ ಇನ್ನೂ ಬಾಕಿ ಇದೆ. ಬಹುಶಃ ಡಿಸೆಂಬರ್ ಕೊನೆಯಲ್ಲಿ ಚಿತ್ರದ ರಿಲೀಸ್ ಯಾವಾಗ ಎಂದು ನಿರ್ಧರಿಸುತ್ತೇವೆ. ಚಿತ್ರದ ಆಡಿಯೋ, ಟೀಸರ್, ಟ್ರೇಲರ್‍ಗಳ ಬಿಡುಗಡೆಯೂ ಅದ್ಧೂರಿಯಾಗಿರಲಿದೆ ಎಂದಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್.

ಒಟ್ಟಿನಲ್ಲಿ ಜನವರಿ ತಿಂಗಳಲ್ಲಿ ಕನ್ನಡ ಸಿನಿಮಾ ರಸಿಕರಿಗೆ ಫುಲ್ ಮೀಲ್ಸ್. 

Shivarjun Movie Gallery

KFCC 75Years Celebrations and Logo Launch Gallery