ಜೋಕೆ... ನಾನು ಬಳ್ಳಿಯ ಮಿಂಚು.. ಈ ಹಾಡನ್ನು ಕೆಜಿಎಫ್‍ನಲ್ಲಿ ಬಳಸಿಕೊಳ್ಳಲಾಗಿದೆ. ಮಿಲ್ಕಿ ಬ್ಯೂಟಿ ತಮನ್ನಾ ಮತ್ತು ಯಶ್ ಆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದು ಹಳೆಯ ವಿಷಯ. ಆದರೆ, ಅದೇ ಕೆಜಿಎಫ್‍ನ ಹಿಂದಿ ವರ್ಷನ್‍ನಲ್ಲಿ ತಮನ್ನಾ ಇಲ್ಲವಂತೆ.
ಹಿಂದಿಯಲ್ಲಿ ತಮನ್ನಾನೂ ಇಲ್ಲ. ಜೋಕೆ ಹಾಡೂ ಇಲ್ಲ. ಅಲ್ಲಿ ತಮನ್ನಾ ಜಾಗದಲ್ಲಿ ಹೆಜ್ಜೆ ಹಾಕಿರೋದು ಮೌನಿರಾಯ್. ಬಳಸಿಕೊಂಡಿರೋ ಹಾಡು ಗಲೀ ಗಲೀ ಮೇ ಫಿರ್ತಾ ಹೈ. ಅದು ಜಾಕಿಶ್ರಾಫ್, ಸಂಗೀತಾ ಬಿಜಲಾನಿ ಅಭಿನಯದ ತ್ರಿದೇವ್ ಚಿತ್ರದ ಸಾಂಗ್.
ಹಿಂದಿಗಾಗಿ ಆ ಹಾಡಿನ ಶೂಟಿಂಗ್ ಈಗಷ್ಟೇ ಶುರುವಾಗಿದೆಯಂತೆ.