ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಕಾಯಕಕ್ಕೆ ಮರಳುತ್ತಿದ್ದಾರೆ. ಆ್ಯಕ್ಸಿಡೆಂಟ್‍ನಲ್ಲಿ ಕೈಗೆ ಪೆಟ್ಟು ಮಾಡಿಕೊಂಡು ಗುಣಮುಖರಾಗಿದ್ದ ದರ್ಶನ್, ಯಜಮಾನ ಚಿತ್ರೀಕರಣಕ್ಕೆ ಸ್ವೀಡನ್‍ಗೆ ಹೋಗಿದ್ದರು. ಅದರ ನಡುವೆಯೇ ಅಪ್ಪಾಜಿ ಅಂಬರೀಷ್ ನಿಧನದಿಂದ ಜರ್ಝರಿತರಾಗಿದ್ದ ದರ್ಶನ್, ಮತ್ತೆ ಕಾಯಕಕ್ಕೆ ಮರಳುತ್ತಿದ್ದಾರೆ. ಡಿಸೆಂಬರ್ 10ರಿಂದ ಒಡೆಯ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಭಾಗವಹಿಸಲಿದ್ದಾರಂತೆ.
ಡಿಸೆಂಬರ್ 10ರಿಂದ ಶೂಟಿಂಗ್ ಶುರುವಾದರೆ, ಸತತ 20 ದಿನಗಳ ಕಾಲ ಬೆಂಗಳೂರಿನಲ್ಲೇ ಶೂಟಿಂಗ್ ನಡೆಯಲಿದೆ. ದರ್ಶನ್‍ಗೆ ನಾಯಕಿಯಾಗಿ ಕೊಡಗಿನ ಸುಂದರಿಯ ಆಯ್ಕೆಯಾಗಿದೆಯಂತೆ. ಅವರ ಹೆಸರನ್ನು ಚಿತ್ರತಂಡ ಗುಟ್ಟಾಗಿಯೇ ಇಟ್ಟಿದೆ. ಶೀಘ್ರದಲ್ಲೇ ಅವರ ಹೆಸರು ಹೇಳಲಿದೆ ಚಿತ್ರತಂಡ. ಡಿಸೆಂಬರ್ 10ರಂದೇ ನಾಯಕಿ ಯಾರೆಂಬುದು ಬಹಿರಂಗವಾಗುವ ಸಾಧ್ಯತೆ ಇದೆ.