` ಕವಿರತ್ನ ಅಲ್ಲ, ಕನ್ನಡ ಮೇಷ್ಟ್ರು ಕಾಳಿದಾಸ ಜಗ್ಗೇಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh as kananda mestru kaalidasa
Jaggesh

ಕವಿರತ್ನ ಕಾಳಿದಾಸ ಎಂದರೆ ಕಾಳಿದಾಸನ ಶಾಕುಂತಲೆ ನೆನಪಿಗೆ ಬರುತ್ತಾಳೋ ಇಲ್ಲವೋ.. ಡಾ.ರಾಜ್‍ಕುಮಾರ್ ಅಂತೂ ಥಟ್ಟನೆ ಕಣ್ಮುಂದೆ ಬರುತ್ತಾರೆ. ಕನ್ನಡಿಗರ ಪಾಲಿಗೆ ಕವಿರತ್ನ ಕಾಳಿದಾಸ ಎಂದರೆ ಡಾ.ರಾಜ್. ಆದರೀಗ ಅಭಿನವ ಕಾಳಿದಾಸನಾಗಿ ಬರುತ್ತಿದ್ದಾರೆ ಜಗ್ಗೇಶ್. ಒಂದೇ ಒಂದು ಬದಲಾವಣೆ.. ಆ ಕಾಳಿದಾಸ ಸಂಸ್ಕøತ ಪಂಡಿತ. ಮಹಾನ್ ಕವಿ. ಈ ಕಾಳಿದಾಸ ಕನ್ನಡ ಮೇಷ್ಟ್ರು.

ಕನ್ನಡ ಮೇಷ್ಟ್ರು ಕಾಳಿದಾಸ. ಇದು ಕವಿರಾಜ್ ನಿರ್ದೇಶನದ ಸಿನಿಮಾ. ಈ ಚಿತ್ರದಲ್ಲಿ ಜಗ್ಗೇಶ್‍ಗೆ ಮೇಘನಾ ಗಾಂವ್ಕರ್ ನಾಯಕಿ. ಅಂಬಿಕಾ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಇಡೀ ಸಿನಿಮಾದಲ್ಲಿ ಮೇಘನಾ, ಜಗ್ಗೇಶ್‍ಗೆ ಹೆದರಿಸ್ತಾ ಇರ್ತಾರಂತೆ. ಮೇಘನಾ ಕಾಳಿಯಾದರೆ, ಜಗ್ಗೇಶ್ ದಾಸ. ಅಫ್‍ಕೋರ್ಸ್.. ಅವರ ಹೆಸರೂ ಕೂಡಾ ಕಾಳಿದಾಸ.

ಇದು ಕಾಮಿಡಿ ಕಾಮಿಡಿಯಾಗಿಯೇ ಸಾಗುತ್ತಾ ಸೀರಿಯಸ್ ಆಗುವ ಸಿನಿಮಾ. ಜಗ್ಗೇಶ್ ಈ ಚಿತ್ರದಲ್ಲಿ ನವರಸಗಳನ್ನೂ ಪ್ರದರ್ಶನ ಮಾಡುವ ಅವಕಾಶ ಇದೆ ಎಂದಿದ್ದಾರೆ ಕವಿರಾಜ್. ಚಿತ್ರದ ಚಿತ್ರೀಕರಣ ಡಿಸೆಂಬರ್ 10ರಿಂದ ಶುರುವಾಗಲಿದೆ.

I Love You Movie Gallery

Rightbanner02_butterfly_inside

Paddehuli Movie Gallery