ಕೆಜಿಎಫ್. ಕನ್ನಡ ಚಿತ್ರರಂಗದ ಈ ಬಹುನಿರೀಕ್ಷಿತ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಜೊತೆಯಲ್ಲೇ ವಿವಾದವನ್ನೂ ಮೈಮೇಲೆ ಎಳೆದುಕೊಂಡಿದೆ. ಇಷ್ಟಕ್ಕೂ ಆಗಿರೋದು ಇಷ್ಟೆ. ಸಲಾಂ ರಾಖಿ ಭಾಯ್ ಹಾಡಿನಲ್ಲಿ ಬಹುತೇಕ ಹಿಂದಿ ಪದಗಳೇ ತುಂಬಿ ಹೋಗಿವೆ. ಮಧ್ಯೆ ಮಧ್ಯೆ ಅಲ್ಲಲ್ಲಿ ಉಪ್ಪಿನ ಕಾಯಿಯಂತೆ ಕನ್ನಡ ಪದಗಳಿವೆ ಅನ್ನೋದು ಹಲವರ ಸಿಟ್ಟಿಗೆ ಕಾರಣ. ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್‍ನ ಈ ಹಾಡನ್ನು ಟೀಕಿಸಿದ ಕನ್ನಡಿಗರೇ ಹೆಚ್ಚು.
ಹಾಡಿನಲ್ಲಿರೋದು ಒಟ್ಟು 51 ಪದಗಳು. ಈ 51 ಪದಗಳಲ್ಲಿ ಕನ್ನಡದ ಪದಗಳು ಇರುವುದು 16 ಪದಗಳು ಮಾತ್ರ. ಇಷ್ಟೆಲ್ಲ ಲೆಕ್ಕಾಚಾರವನ್ನೂ ಕನ್ನಡ ಪ್ರೇಮಿಗಳೇ ಹಾಕಿದ್ದಾರೆ ಎನ್ನುವುದು ವಿಶೇಷ.
ಕನ್ನಡ ಚಿತ್ರವೊಂದು ದೇಶ, ವಿದೇಶಗಳ ಗಡಿಯಲ್ಲಿ ಸದ್ದು ಮಾಡುತ್ತಿರುವಾಗ ಇಂಥ ವಿವಾದ ಬೇಕಾ ಎನ್ನುವವರು ಒಂದು ಕಡೆಯಿದ್ದರೆ, ಕನ್ನಡವೇ ಇಲ್ಲದ ಸಿನಿಮಾ ಸದ್ದು ಮಾಡಿದರೆ, ಕನ್ನಡಕ್ಕೇನು ಲಾಭ ಎನ್ನುವವರು ಮತ್ತೊಂದು ಕಡೆ. ಈ ಎಲ್ಲ ವಿವಾದಗಳ ನಡುವೆಯೂ ಕೆಜಿಎಫ್ ಸದ್ದು ಮಾತ್ರ ಜೋರಾಗಿಯೇ ಇದೆ.