. ಸಾಮಾನ್ಯವಾಗಿ ಚಿತ್ರದ ಪಾತ್ರಧಾರಿಗಳಿಗೆ ಚಿತ್ರ ವಿಚಿತ್ರ ಹೆಸರು ಇಡೋದ್ರಲ್ಲಿ ದುನಿಯಾ ಸೂರಿಯೇ ಫೇಮಸ್. ಆದರೆ, ಅವರನ್ನೂ ಮೀರಿಸಿದ್ದಾರೆ ಎಸ್.ಡಿ. ಅರವಿಂದ್. ಚಿತ್ರದ ಪಾತ್ರಧಾರಿಗಳ ಹೆಸರುಗಳು ಹೀಗೂ ಇರ್ತವಾ ಅಂತನ್ನಿಸೋ ಹಾಗೆ ಪಾತ್ರಧಾರಿಗಳಿಗೆ ಹೆಸರು ಇಟ್ಟಿರೋದು ಮಟಾಶ್ ಡೈರೆಕ್ಟರ್ ಎಸ್.ಡಿ.ಅರವಿಂದ್. ಸುಮ್ಮನೆ ಹಾಗೇ ನೋಡಿ..
ರೂಲ್‍ಬುಕ್ ಅನ್ನೋ ಹೆಸರು ಬಾಲಾಜಿ ಶೆಟ್ಟಿಯದು. ನಾಗಾರ್ಜುನ್ ಪಾತ್ರದ ಹೆಸರು ಫೇಸ್‍ಬುಕ್. ಅಮೋಘ್ ರಾಹುಲ್ ಹೆಸರು ಕಾಮ್ ಸೂತ್ರ. (ಅಪಾರ್ಥ ಬೇಡ. ಅದು ಅಂಐಒ ಸೂತ್ರ.) ಸಮರ್ಥ ನರಸಿಂಹರಾಜು ಪಾತ್ರದ ಹೆಸರು ಎಲ್‍ಕೆಬಿ. ಈ ನಾಲ್ವರದ್ದೂ ಮೈಸೂರು ಗ್ರೂಪ್.
ಇದಕ್ಕೆ ಎದುರಾಗಿ ಬರೋದು ಬಿಜಾಪುರ್ ಗ್ರೂಪ್. ಅವರು ಬರೋದೇ ದುಡ್ಡಿಗಾಗಿ. ಅದಕ್ಕೆ ಗೋಲ್‍ಗುಂಬಜ್ ಸ್ಕೀಮ್ ಅನ್ನೋ ಹೆಸರು.
ನೋಟ್‍ಬ್ಯಾನ್‍ನಲ್ಲಿ ಬ್ಲಾಕ್‍ಮನಿಯನ್ನು ವೈಟ್ ಮಾಡಿಕೊಳ್ಳೋಕೆ ಹೊರಡುವವರು ಏನೇನೆಲ್ಲ ಸರ್ಕಸ್ ಮಾಡುತ್ತಾರೆ ಅನ್ನೋದನ್ನು ಪ್ರೇಕ್ಷಕರು ಥ್ರಿಲ್ಲಾಗುವಂತೆ, ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಗುವಂತೆ ಹೇಳಿದ್ದಾರೆ ಎಸ್.ಡಿ. ಅರವಿಂದ್. ಕಾಮಿಡಿ ಥ್ರಿಲ್ಲರ್ ಮಟಾಶ್, ನಾಳೆ ಚಿತ್ರಮಂದಿರಗಳಲ್ಲಿ ಲಗ್ಗೆ ಇಡೋಕೆ ರೆಡಿಯಾಗಿದೆ.