ಮಟಾಶ್ ಚಿತ್ರದಲ್ಲಿ ಏನಿದೆ..? ಏನಿಲ್ಲ..? ಈಗಾಗಲೇ ಗೊತ್ತಿರೋ ಹಾಗೆ ಮಟಾಶ್ ಚಿತ್ರದಲ್ಲಿರೋದು ನೋಟ್‍ಬ್ಯಾನ್ ಕಥೆ. ಹಾಗಂತ ಸಿನಿಮಾದಲ್ಲಿ ನೋಟ್‍ಬ್ಯಾನ್ ಕಥೆಯನ್ನಷ್ಟೇ ಹೇಳಿಲ್ಲ. ಅಲ್ಲೊಂದು ಟ್ರಯಾಂಗಲ್ ಲವ್ ಸ್ಟೋರಿ ಇದೆ. ಗ್ಯಾಂಗ್‍ಸ್ಟರ್‍ಗಳ ಹೊಡೆದಾಟವಿದೆ. ಹೊಟ್ಟೆ ಹುಣ್ಣಾಗಿಸುವ ಕಾಮಿಡಿ ಇದೆ. ಈ ಎಲ್ಲವನ್ನೂ ಬೆಸುಗೆ ಮಾಡುವುದು ನೋಟ್‍ಬ್ಯಾನ್.
ನೋಟ್‍ಬ್ಯಾನ್‍ನ ಆ ಅವಧಿಯಲ್ಲಿ ಕೆಲವರು ನರಳಿದರು. ಅವರ ನರಳಾಟ ನೋಡಿ ಕೆಲವರು ಮಜಾ ತಗೊಂಡ್ರು. ಅದೆಲ್ಲವನ್ನೂ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಬೆಂಗಳೂರು, ಮೈಸೂರು, ವಿಜಯಪುರದಲ್ಲಿ ಸಿನಿಮಾ ನಡೆಯುತ್ತೆ. ಮಲೆನಾಡಿನ ಹಸಿರಿನ ನಡುವೆಯೂ ಚಿತ್ರ ನಡೆಯುತ್ತೆ. 7 ಹಾಡುಗಳಿವೆ. ಪಕ್ಕಾ ಕಮರ್ಷಿಯಲ್ ಸಿನಿಮಾ ಎಂಬ ಭರವಸೆ ಕೊಡ್ತಾರೆ ನಿರ್ದೇಶಕ ಅರವಿಂದ್.
ಸಣ್ಣ ಎಳೆಯನ್ನಿಟ್ಟುಕೊಂಡು ಪ್ರೇಕ್ಷಕರಿಗೆ ಬೋರ್ ಆಗದಂತೆ ಚಿತ್ರಕಥೆ ಮಾಡೋದ್ರಲ್ಲಿ ಎಸ್.ಡಿ.ಅರವಿಂದ್ ಪಳಗಿದ್ದಾರೆ. ಈ ಹಿಂದಿನ ಚಿತ್ರಗಳಲ್ಲಿ ಅದನ್ನು ಸಾಬೀತೂ ಮಾಡಿರುವ ಅರವಿಂದ್, ಫುಲ್ ಮನರಂಜನ ಇರೋ ಕಾಮಿಡಿ ಥ್ರಿಲ್ಲರ್ ಮಾಡಿದ್ದಾರೆ.