` ಗಣರಾಜ್ಯೋತ್ಸವಕ್ಕೆ ನಟಸಾರ್ವಭೌಮ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
natasarvahouma may release on republic day
Natasarvabhouma

ಪುನೀತ್‍ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಪವನ್ ಒಡೆಯರ್, ರಚಿತಾ ರಾಮ್ ಕಾಂಬಿನೇಷನ್‍ನ ಸಿನಿಮಾ ನಟಸಾರ್ವಭೌಮ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ನಟಸಾರ್ವಭೌಮ, ಗಣರಾಜ್ಯೋತ್ಸವಕ್ಕೆ ರಿಲೀಸ್ ಆಗುವುದು ಪಕ್ಕಾ ಆಗಿದೆ. ಜನವರಿ 24ಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಸಾಧ್ಯತೆಗಳಿವೆ. ಚಿತ್ರದ ಟೀಸರ್ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯರಾಗಿದ್ದು, ಬಿ.ಸರೋಜಾದೇವಿ ಹಲವಾರು ವರ್ಷಗಳ ನಂತರ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. 1984ರಲ್ಲಿ ಯಾರಿವನು ಚಿತ್ರದಲ್ಲಿ ಪುನೀತ್ ಅವರಿಗೆ ತಾಯಿಯಾಗಿ ನಟಿಸಿದ್ದ ಬಿ.ಸರೋಜಾದೇವಿ, ಈ ಚಿತ್ರದಲ್ಲಿ ಸರೋಜಾದೇವಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.