ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಪ್ರೊಡಕ್ಷನ್ ಹೌಸ್, 3ನೇ ಸಿನಿಮಾ ಶುರು ಮಾಡಿದೆ. ಈ ಬಾರಿ ಪುನೀತ್ ಪನ್ನಗಾಭರಣ ಅವರಿಗೆ ನಿರ್ದೇಶನದ ಹೊಣೆ ನೀಡಿದ್ದಾರೆ. ಡ್ಯಾನಿಷ್ ಸೇಠ್ ಚಿತ್ರದ ಹೀರೋ. ದಿಶಾ ಮದನ್ ನಾಯಕಿ.
ಚಿತ್ರದಲ್ಲಿ ಇಬ್ಬರು ಆಟೋ ಡ್ರೈವರ್‍ಗಳ ಕಥೆಯಿದೆ. ಒಬ್ಬ ಶಿವಾಜಿನಗರದವನು. ಇನ್ನೊಬ್ಬ ಫ್ರಾನ್ಸ್‍ನಿಂದ ಬಂದು ಶಿವಾಜಿನಗರದಲ್ಲಿ ಬದುಕುತ್ತಿರುವವನು. ಚಿತ್ರದ ಕಥೆ ಕೇಳಿಯೇ ಪುನೀತ್ ಬಿದ್ದೂ ಬಿದ್ದು ನಕ್ಕರು ಎಂದಿದ್ದಾರೆ ನಿರ್ದೇಶಕ ಪನ್ನಗಾಭರಣ.
ಪುನೀತ್ ಸರ್ ಹೋಮ್ ಬ್ಯಾನರ್‍ನಲ್ಲಿ ನಟಿಸುತ್ತಿರುವುದೇ ದೊಡ್ಡ ಥ್ರಿಲ್ ಎಂದಿದ್ದಾರೆ ಡ್ಯಾನಿಷ್ ಸೇಠ್. ಪಿಆರ್‍ಕೆ ಬ್ಯಾನರ್‍ನ ಕವಲುದಾರಿ ಹಾಗೂ ಮಾಯಾ ಬಜಾರ್, ರಿಲೀಸ್‍ಗೆ ರೆಡಿಯಾಗಿವೆ. 3ನೇ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ ನಡೆದಿದೆ.