ಅನಂತು V/s ನುಸ್ರತ್. ವಿನಯ್ ರಾಜ್ಕುಮಾರ್, ಲತಾ ಹೆಗಡೆ ಕಾಂಬಿನೇಷನ್ನ ಸಿನಿಮಾ. ಸುಧೀರ್ ಶಾನುಭೋಗ್ ನಿರ್ದೇಶನದ ಈ ಸಿನಿಮಾ, ವರ್ಷದ ಕೊನೆಯ ಸಿನಿಮಾ ಆಗುವ ಸಾಧ್ಯತೆಗಳಿವೆ. ಚಿತ್ರವನ್ನು ಡಿಸೆಂಬರ್ 28ಕ್ಕೆ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಅನಂತು V/s ನುಸ್ರತ್ ಚಿತ್ರವನ್ನು ಡಿಸೆಂಬರ್ ಆರಂಭದಲ್ಲೇ ರಿಲೀಸ್ ಮಾಡಬೇಕಿತ್ತು. ಸ್ಟಾರ್ ನಟರ ಚಿತ್ರಗಳೊಂದಿಗೆ ಕ್ಲಾಶ್ ಮಾಡಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಮುಂದೆ ಮುಂದೆ ಹೋಗಿರುವ ಸಿನಿಮಾ, ಕೆಜಿಎಫ್ ರಿಲೀಸ್ ಆದ ನಂತರದ ವಾರದಲ್ಲಿ ರಿಲೀಸ್ ಆಗಲಿದೆ. ಚಿತ್ರದ ಟ್ರೇಲರ್, ಹಾಡುಗಳು ಜನಮೆಚ್ಚುಗೆ ಗಳಿಸಿದ್ದು, ಜಡ್ಜ್ ಮತ್ತು ಲಾಯರ್ ನಡುವಣ ಲವ್ಸ್ಟೋರಿ ಚಿತ್ರದಲ್ಲಿದೆ.