ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ, ಸಂಸದೆಯಾದ ಮೇಲೆ ಮಂಡ್ಯದಲ್ಲೇ ಮನೆ ಮಾಡಿಕೊಂಡಿದ್ದರು. ಮಾಜಿಯಾದ ನಂತರವೂ ಮಂಡ್ಯದಲ್ಲೊಂದು ಬಾಡಿಗೆ ಮನೆ ಮಾಡಿಕೊಂಡಿದ್ದ ರಮ್ಯಾ, ಮಂಡ್ಯದಲ್ಲಿ ಇದ್ದದ್ದು ಮಾತ್ರ ಅಪರೂಪ. ಕರ್ನಾಟಕದಿಂದ ಹೆಚ್ಚೂ ಕಡಿಮೆ ದೂರವಾಗಿರುವ ರಮ್ಯಾ, ಈಗ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಅಂಬರೀಷ್ ಅಂತ್ಯಕ್ರಿಯೆಗಾಗಲೀ, ದರ್ಶನಕ್ಕಾಗಲೀ ಬಾರದ ರಮ್ಯಾಗೆ ಮಂಡ್ಯದ ಜನ ಶ್ರದ್ಧಾಂಜಲಿ ಅರ್ಪಿಸಿದ್ದರು. ಕಾಲು ನೋವು ಎಂದು ರಮ್ಯಾ ಕೊಟ್ಟ ಕಾರಣವನ್ನೂ ಒಪ್ಪಿರಲಿಲ್ಲ.
ಈಗ ರಮ್ಯಾ, ಮಂಡ್ಯದ ಮನೆಯನ್ನು ಖಾಲಿ ಮಾಡಿದ್ದಾರೆ. ಅದೂ ರಾತ್ರೋರಾತ್ರಿ. ಮನೆ ಖಾಲಿ ಮಾಡುವಾಗಲೂ ರಮ್ಯಾ ಮಂಡ್ಯಕ್ಕೇನೂ ಬರಲಿಲ್ಲ. ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಿ, ಅವರೇ ರಮ್ಯಾ ಅವರ ವಸ್ತುಗಳನ್ನು ಮನೆಯಿಂದ ಸಾಗಿಸಿದ್ದಾರೆ.
ಮನೆಯ ಮಾಲೀಕ ಸಾದತ್ ಅಲಿ ಖಾನ್, ಮನೆ ತಮಗೆ ಬೇಕು. ಬಿಟ್ಟುಕೊಡಿ ಎಂದು ಕೇಳಿದರು. ಹಾಗಾಗಿ ಮನೆ ಖಾಲಿ ಮಾಡಿದೆ ಎಂದಿದ್ದಾರೆ ರಮ್ಯಾ.
ವೋಟು ಹಾಕೋಕೂ ಬರದೆ, ಅಂಬರೀಷ್ ಅಂತಿಮ ದರ್ಶನಕ್ಕೂ ಬರದೆ, ಮನೆ ಮಾಡಿಕೊಂಡಿದ್ದರೂ ಒಂದು ದಿನವೂ ಮನೆಯಲ್ಲಿ ಉಳಿಯದೆ ವಿವಾದ ಮಾಡಿಕೊಂಡಿದ್ದ ರಮ್ಯಾ, ಈಗ ಹೆಚ್ಚೂ ಕಡಿಮೆ ಮಂಡ್ಯಕ್ಕೆ ಶಾಶ್ವತವಾಗಿಯೇ ಗುಡ್ ಬೈ ಹೇಳಿದಂತಾಗಿದೆ.