ನೋಟ್‍ಬ್ಯಾನ್ ಆಗಿ 2 ವರ್ಷ ಕಳೆದಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರ ಮೇರೆ ಪ್ಯಾರ್ ದೇಶ್‍ವಾಸಿಯೋ ಅನ್ನೋ ಮಾತು ನಿನ್ನೆ ಮೊನ್ನೆ ಕೇಳಿದಂತೆ ಕಿವಿಯಲ್ಲಿ ಗುಂಯ್‍ಗುಡುತ್ತಿದೆ. ಈಗ ಅದೇ ಸಬ್ಜೆಕ್ಟ್ ಇಟ್ಟುಕೊಂಡು ಮಟಾಶ್ ಅನ್ನೋ ಸಿನಿಮಾ ಸಿದ್ಧ ಮಾಡಿಕೊಂಡು ಬಂದಿದ್ದಾರೆ ಎಸ್.ಡಿ.ಅರವಿಂದ್.
ಮಟಾಶ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಹೊತ್ತಿರುವುದು ಎಸ್.ಡಿ. ಅರವಿಂದ್. ಜುಗಾರಿ, ಲಾಸ್ಟ್‍ಬಸ್ ಎಂಬ ವಿಭಿನ್ನ ಸಿನಿಮಾಗಳ ನಂತರ ಬರುತ್ತಿರುವ ಅಷ್ಟೇ ವಿಭಿನ್ನ ಸಿನಿಮಾ ಮಟಾಶ್. ಚಿತ್ರದ ಟ್ಯಾಗ್‍ಲೈನ್ ಕೂಡಾ ಮಜವಾಗಿದೆ. ಮಾಡ್ತಾ ಇರ್ತೀವಿ ಆಗ್ತಾ ಇರುತ್ತೆ...
ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಹೆಸರು, ಕಥೆ, ನಿರ್ದೇಶಕರ ಹಿಸ್ಟರಿ ಎಲ್ಲವೂ ಕುತೂಹಲಕಾರಿಯಾಗಿದೆ.
ಸತೀಶ್ ಪಾಠಕ್, ಗಿರೀಶ್ ಪಟೇಲ್, ಚಂದ್ರಶೇಖರ್ ಮಣನೂರ ಹಾಗೂ ಎಸ್.ಡಿ.ಅರವಿಂದ್ ಚಿತ್ರದ ನಿರ್ಮಾಪಕರು.