ಕೆಜಿಎಫ್ ಇಡೀ ಇಂಡಿಯಾದಲ್ಲಿ ದೊಡ್ಡದೊಂದು ಹವಾ ಸೃಷ್ಟಿಸುತ್ತಿದೆ. ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್, ಹೊಂಬಾಳೆ ಫಿಲಂಸ್ ಕಾಂಬಿನೇಷನ್‍ನ ಕೆಜಿಎಫ್ 5 ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದ ಈ ಬಹುನಿರೀಕ್ಷಿತ ಚಿತ್ರ ಹಿಂದಿಯಲ್ಲಿ ಸ್ವಲ್ಪ ಡಿಫರೆಂಟ್ ಆಗಿಯೇ ಮೂಡಿ ಬರಲಿದೆ.
ಹಿಂದಿ ಕೆಜಿಎಫ್‍ಗೆ ಕನ್ನಡದ ಡೈಲಾಗ್‍ಗಳನ್ನು ಯಥಾವತ್ ಡಬ್ ಮಾಡಿಲ್ಲ. ಬದಲಿಗೆ, ಹಿಂದಿಗೆ ಒಗ್ಗುವಂತೆ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಡೈಲಾಗ್‍ಗಳನ್ನು ಹಿಂದಿಗೆ ತಕ್ಕಂತೆ ಹೊಸದಾಗಿ ಮಾಡಿದ್ದೇವೆ. ಹಿಂದಿಯ ಕೆಜಿಎಫ್, ಕನ್ನಡದ ಡಬ್ಬಿಂಗ್ ಸಿನಿಮಾದಂತೆ ಕಾಣೋದಿಲ್ಲ ಎಂದು ಹೇಳಿಕೊಂಡಿದೆ ಸಿನಿಮಾ ಟೀಂ.
ಡಿಸೆಂಬರ್ 21ಕ್ಕೆ ತೆರೆಗೆ ಬರುತ್ತಿರುವ ಕೆಜಿಎಫ್‍ನ ಹಿಂದಿ ಆವೃತ್ತಿಯನ್ನು ಫರ್ಹಾನ್ ಅಖ್ತರ್ ಬಿಡುಗಡೆ ಮಾಡುತ್ತಿದ್ದಾರೆ.