ಆರೆಂಜ್. ರಾಜಕುಮಾರಿ ಪ್ರಿಯಾ ಆನಂದ್ ನಟಿಸಿರುವ 2ನೇ ಕನ್ನಡ ಸಿನಿಮಾ. ಈ ಚಿತ್ರದಲ್ಲಿ ಪ್ರಿಯಾ ಅಪ್ಪಟ ಮನೆ ಮಗಳು ಹಾಗೂ ಗ್ಲಾಮರ್ ಗೊಂಬೆ. ಎರಡೂ ರೀತಿಯಲ್ಲಿ ಕಾಣಿಸಿಕೊಳ್ತಾರೆ.
`ಕನ್ನಡದಲ್ಲಿ ಕಥೆ ಚೆನ್ನಾಗಿರುತ್ತೆ. ಹೀಗಾಗಿಯೇ ನಾನು ಕನ್ನಡ ಚಿತ್ರಗಳನ್ನು ಒಪ್ಪಿಕೊಳ್ತೇನೆ. ಆರೆಂಜ್‍ನಲ್ಲೂ ಅಷ್ಟೆ, ಸುಂದರ ಮತ್ತು ಅರ್ಥಪೂರ್ಣ ಕತೆ ಇದೆ. ಆರೆಂಜ್ ಕೂಡಾ ರಾಜಕುಮಾರನಂತೆಯೇ ಹಿಟ್ ಆಗಲಿದೆ' ಇದು ಪ್ರಿಯಾ ಆನಂದ್ ನಿರೀಕ್ಷೆ.
ಚಿತ್ರದ ಟೈಟಲ್ ಆರೆಂಜ್‍ಗೂ, ನಾಯಕಿಗೂ ಸಿಕ್ಕಾಪಟ್ಟೆ ಸಂಬಂಧವಿದೆ. ಅದೇನು ಅನ್ನೋದನ್ನ ಚಿತ್ರದಲ್ಲಿಯೇ ನೋಡಿ ಅಂತಾರೆ ಪ್ರಿಯಾ ಆನಂದ್. ಗಣೇಶ್ ಮತ್ತು ಪ್ರಶಾಂತ್ ರಾಜ್ ಜೋಡಿ ಮತ್ತೊಮ್ಮೆ ಝೂಮ್ ಮ್ಯಾಜಿಕ್ ಮಾಡುವ ಉತ್ಸಾಹದಲ್ಲಿದೆ.