ರೆಬಲ್ಸ್ಟಾರ್ ಅಂಬರೀಷ್ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಚಿತ್ರಲೋಕ ವಿಶೇಷ ನಮನ ಸಲ್ಲಿಸಿತು. ಅಂಬರೀಷ್ ಅವರ ಜೀವನವನ್ನು, ಜೀವನ ಶೈಲಿಯನ್ನು ಕ್ಯಾಮೆರಾದಲ್ಲಿ ಹಿಡಿದಿಟ್ಟಿದ್ದ ಫೋಟೋಗಳನ್ನು ಪ್ರದರ್ಶನ ಮಾಡಿತು. ಒಂದೊಂದು ಫೋಟೋ ಹಿಂದೆಯೂ ನೂರಾರು ನೆನಪುಗಳು. ಚಿತ್ರಲೋಕ ಡಾಟ್ ಕಾಂ ಸಂಪಾದಕ ವೀರೇಶ್ ಅವರ ಕ್ಯಾಮೆರಾ ಕಣ್ಣು, ಹತ್ತಾರು ಕಥೆ ಹೇಳುತ್ತಿದ್ದವು.
ಸಿಎಂ ಕುಮಾರಸ್ವಾಮಿ, ನಿರ್ಮಲಾನಂದನಾಥ ಸ್ವಾಮೀಜಿ, ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್, ಶಿವರಾಜ್ಕುಮಾರ್, ರಾಕ್ಲೈನ್ ವೆಂಕಟೇಶ್, ಮುನಿರತ್ನ, ಜಗ್ಗೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು, ಸಚಿವರು ಫೋಟೋ ವೀಕ್ಷಿಸಿ ಹಳೆಯ ನೆನಪಿನಂಗಳಕ್ಕೆ ಜಾರಿದರು.
ವೀರೇಶ್ ಅವರೊಂದಿಗೆ ಫೋಟೋಗಳ ಕುರಿತು ಮಾಹಿತಿ ಪಡೆದರು. ತಮ್ಮ ನೆನಪನ್ನೂ ಹಂಚಿಕೊಂಡರು.