ಅಂಬರೀಷ್ ಜೊತೆ ನನ್ನ ಮಗ ನಟಿಸಬೇಕಿತ್ತು. ಅದು ನನ್ನ ಕನಸಾಗಿತ್ತು. ಇದಕ್ಕಾಗಿಯೇ ತೆಲುಗಿನ ರೆಬಲ್ ಸಿನಿಮಾದ ರೀಮೇಕ್ ರೈಟ್ಸ್ ತೆಗೆದುಕೊಂಡಿದ್ದೆ. ತೆಲುಗಿನಲ್ಲಿ ಪ್ರಭಾಸ್ ಮಾಡಿದ್ದ ಪಾತ್ರವನ್ನು ನಿಖಿಲ್ ಹಾಗೂ ತಂದೆಯ ಪಾತ್ರದ ಅಂಬರೀಷ್ ನಟಿಸಬೇಕು ಅನ್ನೋದು ನನ್ನ ಆಸೆಯಾಗಿತ್ತು. ಹೀಗಾದರೆ, ಅಂಬರೀಷ್ ಆಶೀರ್ವಾದ ನನ್ನ ಮಗನಿಗೆ ಸಿಗಲಿದೆ ಎಂದು ಆಸೆ ಪಟ್ಟಿದ್ದೆ. ನನ್ನ ಆ ಆಸೆ ಕೊನೆಗೂ ಈಡೇರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ ಕುಮಾರಸ್ವಾಮಿ.
ಅಂಬಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಆರಂಭದ ದಿನಗಳಲ್ಲಿ ತಾವು ಅಂಬರೀಷ್ ಚಿತ್ರಗಳನ್ನು ವಿತರಣೆ ಮಾಡಿಯೇ ಚಿತ್ರರಂಗಕ್ಕೆ ಬಂದವರು ಎಂದು ನೆನಪಿಸಿಕೊಂಡರು.