ಎಲ್ಲ ದೇಶಗಳ, ಎಲ್ಲ ಭಾಷೆಗಳ ಚಿತ್ರಗಳಿಗೂ ಕಾಡುತ್ತಿರುವ ಅತಿದೊಡ್ಡ ಭೂತ ಪೈರಸಿ. ರಜನಿಕಾಂತ್ ಸಿನಿಮಾಗಳನ್ನೂ ಅದು ಬಿಟ್ಟಿಲ್ಲ. ಅದರಲ್ಲೂ ಈ ಬಾರಿ ಓಪನ್ ಚಾಲೆಂಜ್ ಮಾಡಿ ಗೆದ್ದಿದ್ದಾರೆ ಪೈರಸಿ ಕಿರಾತರಕು.
ತಮಿಳ್ ರಾಕರ್ಸ್ ಎಂಬ ವೆಬ್‍ಸೈಟ್‍ನವರು ರಜನಿಕಾಂತ್‍ಗೆ ಓಪನ್ ಚಾಲೆಂಜ್ ಮಾಡಿದ್ದರು. ನೀವು ಅದ್ಯಾವುದೇ ಸೆಕ್ಯುರಿಟಿ ತೆಗೆದುಕೊಳ್ಳಿ, ಅದೆಂಥದ್ದೇ ಟೆಕ್ನಾಲಜಿ ಅಳವಡಿಸಿಕೊಳ್ಳಿ.. ನಿಮ್ಮ ಸಿನಿಮಾ ರಿಲೀಸ್ ಆದ 24 ಗಂಟೆಯೊಳಗೆ ನಾವು ಪೈರಸಿ ಬಿಡುತ್ತೇವೆ ಎಂಬ ಚಾಲೆಂಜ್ ಮಾಡಿದ್ದರು. ತಮಿಳ್ ರಾಕರ್ಸ್ ಅಟ್ಟಹಾಸವನ್ನು ಅರಿತಿದ್ದ ಚಿತ್ರತಂಡ, ತಕ್ಷಣ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತು. ಇಡೀ ಪ್ರಕರಣವನ್ನು ವಿವರಿಸಿತ್ತು. ಮದ್ರಾಸ್ ಹೈಕೋರ್ಟ್ ತಮಿಳ್ ರಾಕರ್ಸ್‍ನ 2000 ವೆಬ್‍ಸೈಟ್‍ಗಳೂ ಸೇರಿದಂತೆ, ಒಟ್ಟು 12,564 ವೆಬ್‍ಸೈಟ್‍ಗಳನ್ನು ಬ್ಲಾಕ್ ಮಾಡಿಸಿತ್ತು. ಇದೆಲ್ಲವನ್ನೂ ದಾಟಿ ತಮಿಳ್ ರಾಕರ್ಸ್ 2.0 ಚಿತ್ರದ ಪೈರಸಿ ಬಿಟ್ಟಿದ್ದಾರೆ. ರಜನಿ ಸೋತಿದ್ದಾರೆ.