` ವಿಷ್ಣು ಸ್ಮಾರಕಕ್ಕೆ ಜಾಗ ನೀಡಲು ಬಂದ ವಿಷ್ಣುದಾದಾ ಫ್ಯಾನ್ಸ್ ಎಷ್ಟು ಜನ ಗೊತ್ತಾ..?  - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
vishnu fans comes forward to help vishnu memorial
Vishnu Memorial

ವಿಷ್ಣು ಸ್ಮಾರಕ ಎಲ್ಲಿ ಆಗಬೇಕು ಎಂಬ ವಿವಾದ ಜಟಾಪಟಿಗೆ ಕಾರಣವಾಗಿರುವಾಗಲೇ, ಜಾಗ ನೀಡಲು ಹಾಗೂ ಖರ್ಚು ವೆಚ್ಚದ ಹೊಣೆ ಹೊತ್ತುಕೊಳ್ಳಲು ವಿಷ್ಣು ಅಭಿಮಾನಿಗಳು ನಾ ಮುಂದು ತಾ ಮುಂದು ಎಂದು ಮುಂದೆ ಬಂದಿದ್ದಾರೆ.

ನಿರ್ಮಾಪಕ ಕೆ.ಮಂಜು, ವಿಷ್ಣು ಪುಣ್ಯಭೂಮಿ ಸ್ಥಳದಲ್ಲಿ 15000 ಚದರಡಿ ಜಾಗವನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ವಿಷ್ಣು ಸ್ಮಾರಕಕ್ಕೆ ನೀಡುವುದಾಗಿ ಘೋಷಿಸಿದ್ದಾರೆ. ಕೆ.ಮಂಜು, ವಿಷ್ಣುವರ್ಧನ್ ಅವರ ಅತಿದೊಡ್ಡ ಅಭಿಮಾನಿಯಾಗಿದ್ದವರು.

ಮತ್ತೊಬ್ಬ ವಿಷ್ಣು ಅಭಿಮಾನಿ ಲೋಕೇಶ್ ಎಂಬುವವರು 50 ಲಕ್ಷ ರೂ. ನೀಡಲು ಮುಂದೆ ಬಂದಿದ್ದಾರೆ.

ಮಂಡ್ಯದ ಉಂಡುವಾಡಿ ಗ್ರಾಮದ ಅಭಿಮಾನಿ ರಾಜಣ್ಣ ಎಂಬುವವರು ಕೆಆರ್‍ಎಸ್ ಬಳಿ ತಮ್ಮ 8 ಸಾವಿರ ಚದರ ಅಡಿ ಜಾಗವನ್ನು ಉಚಿತವಾಗಿ ಕೊಡುತ್ತೆನೆ. ಇನ್ನೂ ಬೇಕು ಎಂದರೆ, ಅದರ ಪಕ್ಕದಲ್ಲಿಯೇ ಇರುವ 13 ಗುಂಟೆ ಜಾಗವನ್ನು ಖರೀದಿಸಿ ಕೊಡುತ್ತೇನೆ ಎಂದಿದ್ದಾರೆ.

ದಾವಣಗೆರೆಯ ರೈತರೊಬ್ಬರು ವಿಷ್ಣು ಸ್ಮಾರಕಕ್ಕೆ 2 ಎಕರೆ ಜಾಗ ನೀಡೋದಾಗಿ ಹೇಳಿದರೆ, ಮೇಲುಕೋಟೆಯ ರಾಜು, ಮೈಸೂರಿನಲ್ಲಿ 15 ಸಾವಿರ ಚದರಡಿ ನಿವೇಶನ ಕೊಡೋದಾಗಿ ಹೇಳಿದ್ದಾರೆ.

ಇದು ಕೇವಲ ಅಭಿಮಾನಕ್ಕಾಗಿ. ದಟ್ ಈಸ್ ವಿಷ್ಣುವರ್ಧನ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery