ರಜನಿಕಾಂತ್-ಅಕ್ಷಯ್‍ಕುಮಾರ್-ಶಂಕರ್ ಕಾಂಬಿನೇಷನ್‍ನ 2.0 ಸಿನಿಮಾ, ಜಗತ್ತಿನ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಇದರ ಜೊತೆಯಲ್ಲೇ ಕೆಜಿಎಫ್ ಕೂಡಾ ಸದ್ದು ಮಾಡುತ್ತಿದೆ.
ಡಿಸೆಂಬರ್ ಅಂತ್ಯದ ಭಾರತದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಕೆಜಿಎಫ್ ಟ್ರೇಲರ್‍ನ್ನು ವಿದೇಶದ ಎಲ್ಲ 2.0 ಸ್ಕ್ರೀನ್‍ಗಳಲ್ಲಿ ಪ್ರದರ್ಶನ ಮಾಡಲಾಗಿದೆ. 2.0 ಕೂಡಾ ಹಲವು ಭಾಷೆಗಳಲ್ಲಿ ನಿರ್ಮಾಣವಾಗಿರುವ ಚಿತ್ರ. ಹೀಗಾಗಿ ವಿದೇಶದಲ್ಲಿ ತೆಲುಗು ಸ್ಕ್ರೀನ್‍ನಲ್ಲಿ ತೆಲುಗು ಕೆಜಿಎಫ್, ತಮಿಳಿ 2.0ನಲ್ಲಿ ತಮಿಳು ಕೆಜಿಎಫ್, ಹಿಂದಿ 2.0ನಲ್ಲಿ ಹಿಂದಿ ಕೆಜಿಎಫ್ ಹಾಗೂ ಮಲಯಾಳಂ 2.0 ಪ್ರದರ್ಶನದಲ್ಲಿ ಮಲಯಾಳಂ ಕೆಜಿಎಫ್‍ನ ಟ್ರೇಲರ್ ಪ್ರದರ್ಶನ ಮಾಡಲಾಗಿದೆ.