` ನಾಳೆಯಿಂದ ಅಂಬಿ ನಿಂಗ್ ವಯಸ್ಸಾಯ್ತೋ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ambi ninge vaisaitho to release tomorrow in abroad
Ambi Ninge Vaisaitho

ರೆಬಲ್‍ಸ್ಟಾರ್ ಅಂಬರೀಷ್ ಅಭಿನಯದ ಕೊನೆಯ ಚಿತ್ರ (ಕುರುಕ್ಷೇತ್ರ ಇನ್ನೂ ಬಿಡುಗಡೆಯಾಗಿಲ್ಲ) ಅಂಬಿ ನಿಂಗ್ ವಯಸ್ಸಾಯ್ತೋ.. ನಾಳೆ ವಿದೇಶಗಳಲ್ಲಿ ರಿಲೀಸ್ ಆಗುತ್ತಿದೆ. ಅಂಬರೀಷ್ ನಿಧನದ ಬೆನ್ನಲ್ಲೇ ಚಿತ್ರವನ್ನು ಮತ್ತೊಮ್ಮೆ ಬಿಡುಗಡೆ ಮಾಡೋದಾಗಿ ಹೇಳಿದ್ದ ನಿರ್ಮಾಪಕ ಜಾಕ್ ಮಂಜು, ವಿದೇಶಗಳಲ್ಲಿಯೇ ಚಿತ್ರ ಬಿಡುಗಡೆಗೆ ಮುಂದಾಗಿದ್ದಾರೆ. 

ಕೆನಡಾದ ಅಟ್ಲಾಂಟಾ, ಮಿಲ್ಪಿಟಾಸ್, ಐರ್ಲೆಂಡ್,ಅಮೆರಿಕದ ಚಿಕಾಗೋ, ಡಲ್ಲಾಸ್ ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.ಸೀಟಲ್, ಸ್ಯಾಂಡಿಯಾಗೋ, ತಂಪಾ, ಲಾಸ್‍ಏಂಜಲೀಸ್, ಸ್ಯಾನ್‍ಜೋಸ್‍ಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ.

ಇನ್ನೊಂದು ವಿಶೇಷವೆಂದರೆ, ಈ ಪ್ರದರ್ಶನದಿಂದ ಬರುವ ಸಂಪೂರ್ಣ ಲಾಭಾಂಶ ಅಂಬರೀಷ್ ನಿಧನರಾದ ದಿನವೇ ಮಂಡ್ಯದಲ್ಲಿನ ಕನಗನ ಮರಡಿ  ಬಸ್  ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಲು ಚಿತ್ರತಂಡ ನಿರ್ಧರಿಸಿದೆ.

Babru Teaser Launch Gallery

Odeya Audio Launch Gallery