ಕೆಜಿಎಫ್ ಚಿತ್ರದ ಹವಾದಲ್ಲಿ ದಾಖಲೆಗಳು ಚಿಂದಿ ಚಿಂದಿಯಾಗುತ್ತಿವೆ. ಕನ್ನಡ ಚಿತ್ರರಂಗದಲ್ಲೇ ಭಾರಿ ಬಜೆಟ್‍ನ, ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್, ಆಡಿಯೋ ರೈಟ್ಸ್‍ನಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿದೆ. ಒನ್ಸ್ ಎಗೇಯ್ನ್, ಈ ದಾಖಲೆ ಮೊತ್ತಕ್ಕೆ ಆಡಿಯೋ ಖರೀದಿಸಿರುವುದು ಲಹರಿ ವೇಲು.
ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಆಡಿಯೋ ರೈಟ್ಸ್‍ನ್ನು ಮಾತ್ರ 3.60 ಕೋಟಿ ಕೊಟ್ಟು ಖರೀದಿಸಿದ್ದಾರೆ. ಹಿಂದಿಯ ರೈಟ್ಸ್‍ನ್ನು ಇನ್ನೂ ಮಾರಾಟ ಮಾಡಿಲ್ಲ. ಈ ದಾಖಲೆ ಮೊತ್ತಕ್ಕೆ ಆಡಿಯೋ ಖರೀದಿಸೋಕೆ ಕಾರಣ, ಚಿತ್ರದ ಟ್ರೇಲರ್‍ಗೆ ಸಿಗುತ್ತಿರುವ ಮೆಚ್ಚುಗೆ. ಎಲ್ಲ ಭಾಷೆಯಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದೇ ಈ ದಾಖಲೆ ಮೊತ್ತದ ಖರೀದಿಗೆ ಕಾರಣ ಎಂದಿದ್ದಾರೆ ಲಹರಿ ವೇಲು.
1992ರಲ್ಲೇ ದಳಪತಿ ಚಿತ್ರದ ಆಡಿಯೋ ರೈಟ್ಸ್‍ನ್ನು 75 ಲಕ್ಷಕ್ಕೆ ಖರೀದಿಸಿದ್ದ ಲಹರಿ ವೇಲು, ಬಾಹುಬಲಿಯನ್ನು 2 ಕೋಟಿ ರೂಗೂ ಹೆಚ್ಚಿನ ಮೊತ್ತಕ್ಕೆ ಖರೀದಿಸಿದ್ದರು. ಈಗ ಮತ್ತೊಮ್ಮೆ ತಮ್ಮದೇ ದಾಖಲೆ ಬ್ರೇಕ್ ಮಾಡಿದ್ದಾರೆ.