` ಕವಚ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kavacha gets u/a certificate
Kavacha

ಡಿಸೆಂಬರ್ 6ಕ್ಕೆ ರಿಲೀಸ್ ಆಗುತ್ತಿರುವ ಕವಚ ಚಿತ್ರ ಸೆನ್ಸಾರ್‍ನಲ್ಲಿ ಪಾಸ್ ಆಗಿದೆ. ಶಿವರಾಜ್‍ಕುಮಾರ್, ಇದೇ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿರುವ ಸಿನಿಮಾ ಕವಚ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

ಶಿವರಾಜ್‍ಕುಮಾರ್, ಬೇಬಿ ಮೀನಾಕ್ಷಿ, ಇಶಾ ಕೊಪ್ಪಿಕರ್, ರವಿಕಾಳೆ, ರಾಜೇಶ್ ನಟರಂಗ, ವಸಿಷ್ಟ ಸಿಂಹ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಎಂ.ವಿ.ವಿ. ಸತ್ಯನಾರಾಯಣ್ ಚಿತ್ರದ ನಿರ್ಮಾಪಕ. ರಾಮ್‍ಗೋಪಾಲ್ ಜೊತೆ ಕೆಲಸ ಮಾಡಿ ಅನುಭವವಿದ್ದ ಜಿವಿಆರ್ ವಾಸು, ಚಿತ್ರದ ನಿರ್ದೇಶಕ. ಇಂತಹ ಕಥೆ, ಕನ್ನಡ ಚಿತ್ರರಂಗಕ್ಕೆ ಹೊಸದು. ಖಂಡಿತಾ ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಲಿದೆ ಎಂದಿದ್ದಾರೆ ವಾಸು.