ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತಾ ಹೆಗ್ಡೆಗೂ, ನೀಲಿ ತಾರೆ ಸನ್ನಿಲಿಯೋನ್‍ಗೂ ಎಲ್ಲಿಂದೆಲ್ಲಿಯ ಹೋಲಿಕೆ..? ಆದರೆ,ಅಂಥಾದ್ದೊಂದು ಹೋಲಿಕೆ ಮಾಡಿದ್ದಾರೆ ನಿರ್ದೇಶಕ ಕೀರ್ತನ್ ಶೆಟ್ಟಿ. ಇಷ್ಟಕ್ಕೂ ಈತ ಯಾರೆಂದು ಹುಡುಕಿದರೆ ಅಲ್ಲೊಂದು ಮೀಟೂ ಕಥೆ ತೆರೆದುಕೊಳ್ಳುತ್ತೆ.
ಈ ಕೀರ್ತನ್ ಶೆಟ್ಟಿ ಮೀಟೂ ಹೆಸರಿನಲ್ಲೊಂದು ಚಿತ್ರ ಮಾಡೋಕೆ ಹೊರಟಿದ್ದಾರೆ. ಆ ಚಿತ್ರಕ್ಕೆ ತೆಲುಗು ಚಿತ್ರರಂಗದಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟಿಸಿದ್ದ, ಚಿತ್ರರಂಗದ ದೊಡ್ಡ ದೊಡ್ಡ ನಟರ ವಿರುದ್ಧ ಆರೋಪ ಮಾಡಿದ್ದ ಶ್ರೀರೆಡ್ಡಿ ಎಂಬ ಹುಡುಗಿ ನಾಯಕಿ. ಆ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಅವರ ಬಗ್ಗೆಯೂ ಒಂದು ಪಾತ್ರ ಬರಲಿದೆ.
ಸಂಯುಕ್ತ ಹೆಗ್ಡೆ ಕನ್ನಡದ ನೀಲಿತಾರೆ. ಹಿಂದಿಯಲ್ಲಿ ಸನ್ನಿಲಿಯೋನ್ ಹೆಂಗೋ ಹಂತೆ ಕರ್ನಾಟಕದಲ್ಲಿ ಸಂಯುಕ್ತಾ ಹೆಗ್ಡೆ. ಗಂಡು ಬೀರಿ ಸಂಯುಕ್ತ ಎಂದೆಲ್ಲ ಬರೆದುಕೊಂಡಿದ್ದಾರೆ ಕೀರ್ತನ್ ಶೆಟ್ಟಿ.
ಯಾವಾಗ ಈ ಹೇಳಿಕೆಗೆ ಜನ ಸಾಮಾನ್ಯರಿಂದಲೇ ವಿರೋಧ ವ್ಯಕ್ತವಾಯಿತೋ.. ಇದು ಪೊಲೀಸರೇ ಸ್ವಯಂ ಕೇಸು ಹಾಕಬಹುದು ಎಂಬ ಅರಿವಾಯಿತೋ.. ತಕ್ಷಣ ತಮ್ಮ ಮೆಸೇಜ್ ಡೀಲಿಟ್ ಮಾಡಿದ್ದಾರೆ ಕೀರ್ತನ್ ಶೆಟ್ಟಿ.