ಯುವರತ್ನ.. ಪವರ್ ಆಫ್ ಯೂತ್.. ಇದು ಅಪ್ಪು-ಸಂತೋಷ್-ಹೊಂಬಾಳೆ ಕಾಂಬಿನೇಷನ್‍ನ ಸಿನಿಮಾ. ರಾಜಕುಮಾರ ಚಿತ್ರದಲ್ಲಿ ಹೊಸ ದಾಖಲೆ ಬರೆದಿದ್ದ ಜೋಡಿಗಳು ಮತ್ತೆ ಒಂದಾಗಿವೆ. ಈ ಜೋಡಿ.. ಮತ್ತೊಂದು ಹೊಸ ಇತಿಹಸ ಸೃಷ್ಟಿಸಲಿ. ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆಯಲಿ ಎಂದು ಶುಭ ಹಾರೈಸಿದ್ದಾರೆ ಕಿಚ್ಚ ಬಾದ್‍ಷಾ ಸುದೀಪ್ ಹಾರೈಕೆ.
ಪುನೀತ್ ರಾಜ್‍ಕುಮಾರ್ ಸಿನಿಮಾಗಳು ಸೈಲೆಂಟ್ ಆಗಿಯೇ ಕ್ರೇಜ್ ಸೃಷ್ಟಿಸುತ್ತವೆ. ಅಬ್ಬರವಿಲ್ಲದೆ ಬಂದು, ಬಾಕ್ಸಾಫೀಸ್‍ನಲ್ಲಿ ಅಬ್ಬರಿಸುತ್ತವೆ. ಈಗ ಯುವರತ್ನ ಅನ್ನೋ ಸಿನಿಮಾ.. ಶೂಟಿಂಗ್ ಶುರುವಾಗುವ ಮೊದಲೇ ಕ್ರೇಜ್ ಸೃಷ್ಟಿಸಿದೆ. ಕಾರಣ ಸಿಂಪಲ್.. ಅದು ರಾಜಕುಮಾರ ಜೋಡಿಯ ಪುನರ್‍ಮಿಲನದ ಸಿನಿಮಾ.
ಈಗ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಹೊರಬಿಟ್ಟಿರುವುದು ಯುವರತ್ನ ಚಿತ್ರದ ಟೈಟಲ್‍ನ ಮುದ್ದಾದ ಫಾಂಟ್‍ಗಳನ್ನು. ಉಳಿದಂತೆ.. ಚಿತ್ರತಂಡದ ತಂತ್ರಜ್ಞರು, ಕಲಾವಿದರ ಆಯ್ಕೆ ಇನ್ನೂ ನಡೆಯುತ್ತಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಸದ್ಯಕ್ಕೆ ಕೆಜಿಎಫ್ ಚಿತ್ರದ ರಿಲೀಸ್‍ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ.