` ಅಭಿಮಾನಿ ದೇವರುಗಳೇ.. ನೀವೂ ನಟಸಾರ್ವಭೌಮರಾಗಿ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
natasarvabhouma challenge to fans
Natasarvabhouma

ನೀವು ಮಾಡಬೇಕಾದ್ದು ಇಷ್ಟೆ. ನಟಸಾರ್ವಭೌಮ ಚಿತ್ರದ ಟೀಸರ್ ನೋಡಿದ್ದೀರಲ್ವಾ..? ಅ ಟೀಸರ್‍ನಲ್ಲಿ ಪುನೀತ್ ರಾಜ್‍ಕುಮಾರ್ ಕಾಣಿಸಿಕೊಂಡಿದ್ರಲ್ಲಾ.. ಅದೇ ಸ್ಟೈಲ್‍ನಲ್ಲಿ ನೀವು ಪುಟ್ಟದೊಂದು ವಿಡಿಯೋ ಮಾಡಬೇಕು. ಆ ವಿಡಿಯೋವನ್ನ #Natasarvabhouma ಹ್ಯಾಷ್‍ಟ್ಯಾಗ್ ಬಳಸಿ, ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಬೇಕು.

ಹೀಗೆ ಮಾಡಿದ ವಿಡಿಯೋಗಲ್ಲಿ ದಿ ಬೆಸ್ಟ್ ವಿಡಿಯೋಗಳನ್ನ ನಟಸಾರ್ವಭೌಮ ಚಿತ್ರತಂಡ ಸೆಲೆಕ್ಟ್ ಮಾಡುತ್ತೆ. ಆ ಅಭಿಮಾನಿ ದೇವರುಗಳು ನಟಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ದಿನದ ಕಾರ್ಯಕ್ರಮದಲ್ಲಿ ಅಪ್ಪು ಜೊತೆ ಸ್ಟೇಜ್ ಮೇಲಿರ್ತಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾ ರಾಮ್-ಅನುಪಮಾ ಪರಮೇಶ್ವರನ್ ನಾಯಕಿಯಾಗಿರುವ ಚಿತ್ರದಲ್ಲಿ ಬಿ.ಸರೋಜಾದೇವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.