ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುಣಮುಖರಾಗಿದ್ದಾರೆ. ಆಕ್ಸಿಡೆಂಟ್ ನಂತರ ಕೈಗೆ ಪ್ಲಾಸ್ಟರ್ ಹಾಕಿಕೊಂಡಿದ್ದ ದರ್ಶನ್, ಮತ್ತೆ ಕಾಯಕದತ್ತ ಮುಖ ಮಾಡಿದ್ದಾರೆ. ಯಜಮಾನ ಚಿತ್ರದ ಹಾಡುಗಳ ಶೂಟಿಂಗ್ ಶುರುವಾಗಿದೆ. ಸ್ವೀಡನ್‍ನಲ್ಲಿ.
ಚಿತ್ರತಂಡದ ಜೊತೆ ಸ್ವೀಡನ್‍ನತ್ತ ಪ್ರಯಾಣ ಬೆಳೆಸಿದ್ದಾರೆ ದರ್ಶನ್. ಡ್ಯಾನ್ಸ್ ಮಾಸ್ಟರ್ ಗಣೇಶ್ ಹಾಡುಗಳ ಕೊರಿಯೋಗ್ರಫಿ ಮಾಡಲಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ದರ್ಶನ್ ಅವರ ಮೇಲೆ ಫೋಕಸ್ ಆಗಿರುವ ಹಾಡುಗಳ ಶೂಟಿಂಗ್ ಸ್ವೀಡನ್‍ನಲ್ಲಿ ನಡೆಯಲಿದೆ.