` ಯಾರೊ ಯಾರೋ ಎಂದ ಚೆಲುವೆಗೆ ಗಣೇಶ್ ಏನಂದ್ರು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
orange releasing on dec 7th
Orange

ಯಾರೋ ಯಾರೋ.. ಯಾರೋ.. ನೀನು.. ನಂಗೆ ನೀನು ಯಾರು..

ಹೇಳು ಹೇಳು ಹೇಳು.. ನೀನೇ ನಂಗೆ ಚೂರು..

ಇದು ಆರೆಂಜ್ ಚಿತ್ರದ ಗೀತೆಯ ಸಾಲು. ರಾಜಕುಮಾರಿ ಪ್ರಿಯಾ ಆನಂದ್, ಈ ಚಿತ್ರದಲ್ಲಿ ಚೆಲುವ ಗಣೇಶ್‍ಗೆ ಹಾಡುವ ಹಾಡಿದು. ಚೆಲುವೆಯ ಕಣ್ಣೋಟಕ್ಕೆ ಗಣೇಶ್ ಏನ್ ಹೇಳಿದ್ರು ಅನ್ನೋದನ್ನ ಸಿನಿಮಾದಲ್ಲೇ ನೋಡಬೇಕು. ಡಿಸೆಂಬರ್ ಮೊದಲ ವಾರದಲ್ಲಿ ರಿಲೀಸ್ ಆಗುತ್ತಿರುವ ಆರೆಂಜ್‍ಗೆ ಪ್ರಶಾಂತ್ ರಾಜ್ ನಿರ್ದೇಶನವಿದೆ. 

ಜೂಮ್ ಚಿತ್ರದಲ್ಲಿ ಮೋಡಿ ಮಾಡಿದ್ದ ಜೋಡಿ, ಆರೆಂಜ್‍ನಲ್ಲಿ ಮತ್ತೆ ಒಂದಾಗಿದೆ. ರಿಲೀಸ್ ಡೇಟ್ ಘೋಷಿಸಿ ಟ್ರೇಲರ್ ರಿಲೀಸ್ ಮಾಡಲು ಸಿದ್ಧತೆ ನಡೆಸಿರುವ ಚಿತ್ರತಂಡ, ಕೆಲವೇ ದಿನಗಳಲ್ಲಿ ಟ್ರೇಲರ್ ಬಿಡುತ್ತಿದೆ. ಎಸ್.ಎಸ್.ತಮನ್ ಸಂಗೀತ ನಿರ್ದೇಶನದ ಹಾಡುಗಳು ಸದ್ದು ಮಾಡುತ್ತಿದ್ದು, ಅಬ್ಬರಕ್ಕಿಂತ ಹೆಚ್ಚಾಗಿ  ಮೆಲೋಡಿ ಹಾಡುಗಳಿವೆ. ಖೈದಿಯ ವೇಷದಲ್ಲಿ ಗಣೇಶ್‍ರ ಫಸ್ಟ್ ಲುಕ್ ಕೊಟ್ಟಿದ್ದ ಪ್ರಶಾಂತ್ ರಾಜ್, ಟ್ರೇಲರ್‍ನಲ್ಲಿ ಏನು ಸ್ಪೆಷಲ್ ಕೊಡ್ತಾರೆ. ಜಸ್ಟ್ ವೇಯ್ಟ್

Ayushmanbhava Movie Gallery

Kabza Movie Launch Gallery