ಅದು ಜಗ್ಗೇಶ್ ಪಾಲಿನ ಪ್ರೇಮಾಲಯ ಎಂದರೆ ತಪ್ಪಾಗಲಿಕ್ಕಿಲ್ಲ. ಅವರು ಪರಿಮಳಾ ಅವರನ್ನು ಮದುವೆಯಾಗಿ.. ದೇಶದಲ್ಲೇ ಸಂಚಲನ ಮೂಡಿಸುವಂತೆ ಸುಪ್ರೀಂಕೋರ್ಟ್‍ನಲ್ಲಿ ಗೆದ್ದು ಮದುವೆಯಾದ ಜಗ್ಗೇಶ್, ಪತ್ನಿಯೊಂದಿಗೆ ಮೊದಲು ಹೋಗಿದ್ದು ಮಂತ್ರಾಲಯಕ್ಕೆ. ಅಲ್ಲಿ ಅವರು ತುಂಗೆಯ ಮೇಲೆ ನೀರಿನ ಹರಿವಿನ ನಡುವೆ ಒಂದು ಪ್ರೇಮಾಲಯ ಕಟ್ಟಿದ್ದಾರೆ. ಅದೇ ಇದು.
ಅಲ್ಲಿನ ಬಂಡೆಯ ಮೇಲೆ ಜಗದೀಶ ಪರಿಮಳ ಶ್ರೀರಾಮ್‍ಪುರ, ಬೆಂಗಳೂರು ಎಂದು ಬರೆದಿದ್ದಾರೆ. ವಿಶೇಷವೇನು ಗೊತ್ತೇ.. ಅವರು ಆ ಕಲ್ಲಿನ ಮೇಲೆ ಇದನ್ನೆಲ್ಲ ಕೆತ್ತಿದ್ದು 1983ರ ನವೆಂಬರ್ 17ರಂದು. ತುಂಗೆಯಲ್ಲಿ ನೀರಿನ ಹರಿವು ಕಡಿಮೆಯಾದರೆ ಆ ಕಲ್ಲು, ಆ ಕಲ್ಲಿನ ಮೇಲೆ ಇವರೇ ಕೆತ್ತಿಕೊಂಡಿರುವ ಪ್ರೇಮಾಲಯ ಕಣ್ಣಿಗೆ ಬೀಳುತ್ತೆ.
ನವೆಂಬರ್ 17, ಜಗ್ಗೇಶ್ ಮದುವೆಯಾದ ದಿನ. ಅಂತಹ ಮದುವೆಯ ವಾರ್ಷಿಕೋತ್ಸವದಂದು ಮಂತ್ರಾಲಯಕ್ಕೆ ಹೋಗಿ ರಾಘವೇಂದ್ರರ ದರ್ಶನ ಮಾಡಿಕೊಂಡು ಬರುವಾಗ ಬಂಡೆಯ ಮೇಲೆ ಕೆತ್ತಿದ ಪ್ರೇಮ ಬರಹವಿದು.