ಪ್ರತಿಯೊಬ್ಬ ಸ್ಟಾರ್ ನಟನಿಗೂ ಒಂದಲ್ಲ ಒಂದು ಬಿರುದುಗಳಿದ್ದೇ ಇರುತ್ತವೆ. ಆ ಬಿರುದುಗಳನ್ನೆಲ್ಲ ಬದಿಗಿಟ್ಟು, ತಮ್ಮ ಚಿತ್ರದ ಪಾತ್ರದ ಹೆಸರಿನ ಮೂಲಕವೇ ಗುರುತಿಸಿಕೊಳ್ಳೋ ಅದೃಷ್ಟ ಎಲ್ಲರಿಗೂ ಇರೋದಿಲ್ಲ. ಸುದೀಪ್ ಅಂತಹ ಅದೃಷ್ಟವಂತ. ಅವರಿಗೆ ಅಭಿಮಾನಿಗಳು ಅಭಿನಯ ಚಕ್ರವರ್ತಿಯೆಂದರೂ, ಇಡೀ ಭಾರತೀಯ ಚಿತ್ರರಂಗ ಅವರನ್ನು ಗುರುತಿಸುವುದೇ ಕಿಚ್ಚ ಸುದೀಪ ಎಂದು.
ಈಗ ಈ ಕಿಚ್ಚ ಸುದೀಪ್‍ಗೆ ಪೈಲ್ವಾನ್ ಟೀಂ ಹೊಸ ಬಿರುದನ್ನಿತ್ತಿದೆ. ಬಾದ್‍ಷಾ..! ಈ ಬಿರುದು ಕೊಟ್ಟೇ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ ಆರ್.ಆರ್.ಮೋಷನ್ ಪಿಕ್ಚರ್ಸ್. ಗರಡಿ ಮನೆಯ ಮಣ್ಣಿನಲ್ಲೇ ಮಿಂದೆದ್ದಂತಿರುವ ಸುದೀಪ್‍ರ ಲುಕ್ ಹಿಂದಿರೋದು ನಿರ್ದೇಶಕ ಕೃಷ್ಣ ಕೈಚಳಕ.
ಬಾಲಿವುಡ್‍ನಲ್ಲಿ ಬಾದ್‍ಷಾ ಎಂದು ಗುರುತಿಸಿಕೊಳ್ಳೋದು ಶಾರೂಕ್ ಖಾನ್. ಬಾದ್‍ಷಾ ಎಂದು ಕರೆಯಲ್ಪಡುತ್ತಿದ್ದ ದೊರೆ ದೆಹಲಿಯನ್ನಾಳಿದ ಅಕ್ಬರ್. ಈಗ ಪೈಲ್ವಾನ್ ಸುದೀಪ್, ಬಾದ್‍ಷಾ ಸುದೀಪ್ ಆಗಿದ್ದಾರೆ ಜಹಾಪನಾ..