Print 
golden star ganesh, shivarajkumar, kavacha orange,

User Rating: 5 / 5

Star activeStar activeStar activeStar activeStar active
 
shivanna's kavachan and ganesh;s orange to clash on same day
Kavacha, Orange movie Image

2019ರ ಡಿಸೆಂಬರ್ ಸ್ಟಾರ್ ವಾರ್‍ಗೆ ಸಾಕ್ಷಿಯಾಗುತ್ತಾ..? ಅಂಥಾದ್ದೊಂದು ಲೆಕ್ಕಾಚಾರ, ನಿರೀಕ್ಷೆಗಳು ಗರಿಗೆದರುತ್ತಿವೆ. ಡಿಸೆಂಬರ್ 21ಕ್ಕೆ ಕೆಜಿಎಫ್ ರಿಲೀಸ್ ಆಗುತ್ತಿದ್ದು, ಅದೇ ದಿನ ಉಪೇಂದ್ರ-ರಚಿತಾ ರಾಮ್-ಎ.ಪಿ.ಅರ್ಜುನ್ ಕಾಂಬಿನೇಷನ್‍ನ ಐ ಲವ್ ಯು ತೆರೆ ಕಾಣುವ ಸಾಧ್ಯತೆ ಇದೆ. ಹೀಗಿರುವಾಗಲೇ ಅದಕ್ಕೂ ಮೊದಲು ಡಿಸೆಂಬರ್ 7ಕ್ಕೆ ಶಿವಣ್ಣ ಮತ್ತು ಗಣೇಶ್ ಚಿತ್ರಗಳು ಮುಖಾಮುಖಿಯಾಗಲಿವೆ.

ಡಿಸೆಂಬರ್ 7ಕ್ಕೆ ಗಣೇಶ್ ಅಭಿನಯದ ಆರೆಂಜ್ ರಿಲೀಸ್ ಆಗುತ್ತಿದೆ. ಅದೇ ದಿನ ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರವೂ ರಿಲೀಸ್ ಆಗುವ ಸಾಧ್ಯತೆ ಇದೆ.

ಆರೆಂಜ್, ಪ್ರಶಾಂತ್ ರಾಜ್ ನಿರ್ದೇಶನದ ಸಿನಿಮಾ. ರಾಜಕುಮಾರಿ ಪ್ರಿಯಾ ಆನಂದ್ ನಾಯಕಿ. ಜೂಮ್ ಚಿತ್ರದ ನಂತರ ಗಣೇಶ್-ಪ್ರಶಾಂತ್ ರಾಜ್ ಒಂದಾಗಿರುವ ಸಿನಿಮಾ ಇದು.

ಇನ್ನು ಕವಚ, ಮಲಯಾಳಂನ ಒಪ್ಪಂ ಚಿತ್ರದ ರೀಮೇಕ್. ಹಲವು ವರ್ಷಗಳ ನಂತರ ಶಿವಣ್ಣ ಇಷ್ಟಪಟ್ಟು ನಟಿಸಿರುವ ರೀಮೇಕ್ ಸಿನಿಮಾ. ಇಶಾ ಕೊಪ್ಪಿಕರ್ ನಾಯಕಿಯಾಗಿರುವ ಈ ಚಿತ್ರದಲ್ಲಿ ಶಿವಣ್ಣ, ಅಂಧನಾಗಿ ನಟಿಸಿದ್ದಾರೆ. 

ಇಬ್ಬರು ಸ್ಟಾರ್‍ಗಳ ಸಿನಿಮಾ ಒಂದೇ ದಿನ ಬಂದರೆ, ಡಿಸೆಂಬರ್ 7 ಧಮಾಕಾ ಸೃಷ್ಟಿಸಲಿದೆ.