ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾಗಳಲ್ಲಿ ಹಿಂದಿನ ಸಿನಿಮಾಗಳದ್ದೆಲ್ಲ ಒಂದು ತೂಕವಾದರೆ, ರಾಜಕುಮಾರ ಚಿತ್ರದ್ದೇ ಒಂದು ತೂಕ. ಹಿರಿಯರನ್ನು ಪ್ರೀತಿಸಬೇಕು, ಗೌರವಿಸಬೇಕು ಎಂಬ ಸಂದೇಶವನ್ನು ಅಷ್ಟೇ ಚೆಂದವಾಗಿ ಹೇಳಿ ಗೆದ್ದಿದ್ದರು ಸಂತೋಷ್ ಆನಂದ್‍ರಾಮ್. ಈ ಸಂತೋಷ್, ಅಪ್ಪು ಅಭಿಮಾನಿಯಾಗಿ 10 ವರ್ಷ.
2007ರಲ್ಲಿ ಸಂತೋಷ್ ಆನಂದ್‍ರಾಮ್, ಶೇಷಾದ್ರಿಪುರಂ ಕಾಲೇಜ್‍ನಲ್ಲಿ ಓದುತ್ತಿದ್ದರು. ಆಗ ಪುನೀತ್ ರಾಜ್‍ಕುಮಾರ್ ಅವರನ್ನು ಕಾಲೇಜ್‍ಗೆ ಅತಿಥಿಯಾಗಿ ಕರೆದು ತಂದಿದ್ದರು. ರಾಘಣ್ಣನನ್ನು ಸಂಪರ್ಕಿಸಿ, ಅಪ್ಪು ಕಾರ್‍ನಲ್ಲೇ ಬಂದು ಅವರ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದರು ಸಂತೋಷ್ ಆನಂದ್‍ರಾಮ್.
ಅದೆಲ್ಲ ಆಗಿ 10 ವರ್ಷ ಕಳೆದು ಹೋಗಿವೆ. ಅದೇ ಸಂತೋಷ್ ರಾಜಕುಮಾರದ ನಂತರ ಯುವರತ್ನ ನಿರ್ದೇಶನಕ್ಕೆ ಸಿದ್ಧರಾಗಿದ್ದಾರೆ. ನೆನೆ ನೆನೆ ಆ ದಿನವಾ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಸಂತೋಷ್.