ಕೆಜಿಎಫ್ ಸಿನಿಮಾ ಭಾರತದಲ್ಲಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ಸದ್ದು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಈ ರೀತಿ ಹವಾ ಸೃಷ್ಟಿಸುತ್ತಿದೆ. ಪಾಕಿಸ್ತಾನದಲ್ಲಿಯೂ ಚಿತ್ರದ ಬಗ್ಗೆ ಕ್ರೇಜ್ ಸೃಷ್ಟಿಯಾಗಿದ್ದು, ಚಿತ್ರವನ್ನು ನೋಡೋಕೆ ರೆಡಿಯಾಗಿದ್ದಾರೆ.
ಇದು ಮಾಮೂಲಿ ಸಲ್ಮಾನ್, ಶಾರುಕ್ ಸಿನಿಮಾ ಅಲ್ಲ. ಚಿತ್ರದ ಮೇಕಿಂಗ್ ವಂಡರ್‍ಫುಲ್ ಆಗಿದೆ. ಡೈಲಾಗ್‍ಗಳೂ ಕಿಕ್ ಕೊಡುತ್ತಿವೆ. ಮಾಮೂಲಿ ಬಾಲಿವುಡ್ ಸಿನಿಮಾಗಿಂತ ಬೇರೆಯದೇ ಆದ ಸಿನಿಮಾ ಇದು. ನಾವಂತೂ ನೋಡಲು ಕಾಯುತ್ತಿದ್ದೇವೆ ಎಂದು ಪಾಕಿಸ್ತಾನದಲ್ಲಿರುವ ಬಾಲಿವುಡ್ ಸಿನಿಮಾ ಅಭಿಮಾನಿಗಳು ವಿಡಿಯೋ ಹೇಳಿಕೆ ಕೊಟ್ಟಿದ್ದಾರೆ.
ಹೊಂಬಾಳೆ ಫಿಲಂಸ್ ಭರ್ಜರಿ ಹಿಟ್ ಕೊಡುವುದಕ್ಕೆ, ಸಂಭ್ರಮಿಸುವುದಕ್ಕೆ ಸಿದ್ಧವಾಗುತ್ತಿದೆ.