ಶೃತಿ ಹರಿಹರನ್ ವ/ಸ ಅರ್ಜುಜ್ ಸರ್ಜಾ ನಡುವಣ ಮೀಟೂ ಗಲಾಟೆ ದಿನೇ ದಿನೇ ವಿಸ್ತರಿಸಿಕೊಳ್ಳುತ್ತಲೇ ಹೋಗುತ್ತಿದೆ. ಸದ್ಯಕ್ಕೆ ನ್ಯಾಯಾಲಯದಲ್ಲಿರುವ ಪ್ರಕರಣದ ವಿಚಾರಣೆ ಮುಂದಕ್ಕೆ ಹೋಗಿದ್ದರೆ, ಇತ್ತ ಶೃತಿ ಹರಿಹರನ್ ಮಹಿಳಾ ಆಯೋಗದ ಮೆಟ್ಟಿಲು ಹತ್ತಿದ್ದಾರೆ.
ಆ ನಂತರ ಮಾತನಾಡಿರುವ ಶೃತಿ ಹರಿಹರನ್ `ನಾನು ಮಾಡಿರುವ ಆರೋಪದ ಕುರಿತು ನನ್ನ ಬಳಿ ವಿಡಿಯೋ ಸಾಕ್ಷ್ಯ ಇದೆ. ಅದನ್ನು ನಾನು ಮಹಿಳಾ ಆಯೋಗದ ಅಧ್ಯಕ್ಷರಿಗೆ ತೋರಿಸಿದ್ದೇನೆ. ಕೋರ್ಟ್‍ನಲ್ಲಿಯೂ ತೋರಿಸುತ್ತೇನೆ. ಫ್ರೆಶರ್ ಕುಕ್ಕರ್ ಹಾಗೇನೇ.. ವಿಶಲ್ ಹೋಗ್ತಾ ಹೋಗ್ತಾ ಒಂದ್ಸಲ ಬ್ಲಾಸ್ಟ್ ಆಗುತ್ತೆ. ನಾನು ನ್ಯಾಯಾಲಯದಲ್ಲಿ ವಿನ್ ಆಗ್ತೀನಿ'' ಎಂದಿದ್ದಾರೆ.
ಸಂಜನಾ ಗಲ್ರಾನಿ ರೀತಿ ನಾನು ಕ್ಷಮೆ ಕೇಳಲ್ಲ. ಚಿತ್ರರಂಗದ ಯಾವೊಬ್ಬ ಹೀರೋಯಿನ್ ಕೂಡಾ ನನ್ನ ಬೆಂಬಲಕ್ಕೆ ಬಂದಿಲ್ಲ. ದೇವರು ನನಗೆ ಒಬ್ಬಳೇ ಎಲ್ಲವನ್ನೂ ಫೇಸ್ ಮಾಡುವ ಶಕ್ತಿ ಕೊಟ್ಟಿದ್ದಾನೆ. ನಾನು ಫೇಸ್ ಮಾಡುತ್ತೇನೆ ಎಂದಿದ್ದಾರೆ ಶೃತಿ ಹರಿಹರನ್.