ಕನ್ನಡದಲ್ಲಿ ಫಿಟ್‍ನೆಸ್ ಮೈಂಟೇನ್ ಮಾಡುವ ಕೆಲವೇ ನಟರಲ್ಲಿ ಸುದೀಪ್ ಕೂಡಾ ಒಬ್ಬರು. ಅವರು ಮೊದಲಿನಿಂದಲೂ ತೀರಾ ದಪ್ಪಗೂ ಆಗಿಲ್ಲ. ತೀರಾ ತೆಳ್ಳಗೂ ಆಗಿಲ್ಲ. ಎಲ್ಲ ಓಕೆ.. ಕಿಚ್ಚ ಸುದೀಪ್ ಈಗ ಎಷ್ಟು ಕೆಜಿ ತೂಕವಿದ್ದಾರೆ..?
89 ಕೆಜಿ ತೂಗುತ್ತಿದ್ದ ಸುದೀಪ್, ಈಗ 73 ಕೆಜಿಗೆ ಇಳಿದಿದ್ದಾರೆ. 36 ಇದ್ದ ಎದೆಯ ಸುತ್ತಳತೆ ಈಗ 31.5ಕ್ಕೆ ಇಳಿದಿದೆ. ಎಲ್ಲದಕ್ಕೂ ಕಾರಣ.. ಪೈಲ್ವಾನ್ ಸಿನಿಮಾ. ಪೈಲ್ವಾನ್ ಸಿನಿಮಾಗಾಗಿ ಕಸರತ್ತು ಮಾಡುತ್ತಿರುವ ಸುದೀಪ್, ಇದಕ್ಕೆ ಸ್ಫೂರ್ತಿ ನೀಡಿದ ಪೈಲ್ವಾನ್ ಚಿತ್ರತಂಡ ಹಾಗೂ ನಟ ಕಬೀರ್ ದುಲ್ಹನ್ ಸಿಂಗ್‍ಗೆ ಥ್ಯಾಂಕ್ಸ್ ಹೇಳಿದ್ದಾರೆ.