ಗಂಡ ಹೆಂಡತಿ ಖ್ಯಾತಿಯ ಸಂಜನಾ ಗಲ್ರಾನಿ, ಗಂಡ ಹೆಂಡತಿ ಚಿತ್ರತಂಡ ಹಾಗೂ ನಿರ್ದೇಶಕರ ಸಂಘದ ಕ್ಷಮೆ ಯಾಚಿಸಿದ್ದಾರೆ. ಮೀಟೂ ಅಭಿಯಾನ ಆರಂಭವಾದಾಗ, ನಿರ್ದೇಶಕ ರವಿ ಶ್ರೀವತ್ಸ ಹಾಗೂ ಇಡೀ ಚಿತ್ರತಂಡ ನನ್ನನ್ನು ಹೆದರಿಸಿ ಕಿಸ್ಸಿಂಗ್ ಸೀನ್ ಮತ್ತು ರೊಮ್ಯಾಂಟಿಕ್ ಸೀನ್ ಮಾಡಿಸಿದರು. ನಾನಾಗ ಚಿಕ್ಕ ಹುಡುಗಿ. ನನ್ನನ್ನು ಅಶ್ಲೀಲವಾಗಿ ತೋರಿಸಿದರು ಎಂದೆಲ್ಲ ಆರೋಪಿಸಿದ್ದರು. ರವಿ ಶ್ರೀವತ್ಸ ಕಾನೂನು ಸಮರದ ಎಚ್ಚರಿಕೆ ನೀಡಿದ್ದರು. ನಿರ್ದೇಶಕರ ಸಂಘ ಬಹಿರಂಗ ಕ್ಷಮೆಯಾಚನೆಗೆ ಪಟ್ಟು ಹಿಡಿದಿತ್ತು. ಕೊನೆಗೆ ಅಂಬರೀಷ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಸಂಜನಾ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.
ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರ ಎದುರಿನಲ್ಲಿಯೇ ವಿಡಿಯೋ ಹೇಳಿಕೆ ನೀಡಿದ್ದಾರೆ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ಅಂಬರೀಷ್, ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣನವರ ಮಾತು ಕೇಳಿ ಕ್ಷಮೆ ಕೇಳುತ್ತಿದ್ದೇನೆ ಎಂದು ಕ್ಷಮೆ ಕೇಳಿದ್ದಾರೆ.
ನಿರ್ದೇಶಕ ರವಿ ಶ್ರೀವತ್ಸ ಹಾಗೂ ಇಡೀ ಗಂಡ ಹೆಂಡತಿ ಚಿತ್ರತಂಡದ ಕ್ಷಮೆ ಕೇಳಿರುವ ಸಂಜನಾ, ಒಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.