ಕಿಚ್ಚ ಸುದೀಪ್, ಕೃಷ್ಣ ಕಾಂಬಿನೇಷನ್‍ನ ಪೈಲ್ವಾನ್ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರದ ಕುಸ್ತಿ ದೃಶ್ಯಗಳ ಶೂಟಿಂಗ್‍ಗೆಂದೇ 8 ಸೆಟ್ ಹಾಕಲಾಗಿದೆ. ಒಂದೊಂದು ಸೆಟ್ ಕೂಡಾ ಅದ್ಭುತ.. ಅದ್ಧೂರಿ..
ಕುಸ್ತಿಯ ಅಖಾಡ, ಗರಡಿ ಮನೆಯ ಅಖಾಡ, ಆಂಜನೇಯದ ವಿಗ್ರಹ, ಅರಮನೆಯ ಎದುರಿನ ಅಖಾಡ, ಬಾಕ್ಸಿಂಗ್ ರಿಂಗ್.. ಹೀಗೆ ತರಹೇವಾರಿ ಸೆಟ್‍ಗಳು ಸಿದ್ಧವಾಗಿವೆ. ಸೆಟ್‍ಗಳನ್ನು ನೋಡುತ್ತಿದ್ದರೆ ಚಿತ್ರದ ದೃಶ್ಯಗಳು ಹೇಗಿರಬಹುದು ಎಂಬ ಕಲ್ಪನೆ ಪ್ರೇಕ್ಷಕರ ಕಣ್ಣೆದುರು ಸುಳಿದು ಹೋಗುವುದು ಖಂಡಿತಾ.