ತಾಯಿಗೆ ತಕ್ಕ ಮಗ ಚಿತ್ರದಲ್ಲೇನಿದೆ..? ಕಥೆಯಲ್ಲಿ ಅಂಥಾ ವಿಶೇಷ ಏನಿದೆ..? ಹೀಗೆ ಹುಡುಕುತ್ತಾ ಹೋದರೆ ನಾಯಕ ನಟ ಅಜಯ್ ರಾವ್ ಕನಸು ತೆರೆದುಕೊಳ್ಳುತ್ತೆ. ಬ್ರೂಸ್ ಲೀ ಸಿನಿಮಾಗಳನ್ನು ನೋಡಿ ನೋಡಿ ಕರಾಟೆ ಕಲಿತಿದ್ದ, ಅಂಬರೀಷ್, ಅಮಿತಾಬ್ ಸಿನಿಮಾಗಳನ್ನು ನೋಡಿ ಆ್ಯಂಗ್ರಿಯಂಗ್ ಮ್ಯಾನ್ ಆಗಬೇಕು ಎಂದುಕೊಂಡಿದ್ದ ಅಜಯ್ ರಾವ್‍ಗೆ ಆರಂಭದಲ್ಲಿ ಸಿಕ್ಕಿದ್ದು ಚಾಕೊಲೇಟ್ ಹೀರೋ ಪಾತ್ರಗಳು. ಈಗ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅವರ ಕನಸಿನ ರೋಲ್ ಸಿಕ್ಕಿದೆ.
ಚಿತ್ರದಲ್ಲಿ ತಾಯಿ ಸುಮಲತಾ ಅವರದ್ದು ಕ್ರಾಂತಿಯಾದರೆ, ಮಗ ಅಜಯ್ ರಾವ್ ಅವರದ್ದು ಆಕ್ರೋಶ, ಆವೇಶದ ಪಾತ್ರ. ನಾಯಕಿ ಅಶಿಕಾ ರಂಗನಾಥ್ ಅವರದ್ದು ಶಾಂತಂ.. ಶಾಂತಂ. ಇವರೆಲ್ಲರ ಸಂಗಮದ ಕಥೆಯೇ ತಾಯಿಗೆ ತಕ್ಕ ಮಗ.
ನಿರ್ದೇಶಕ ಶಶಾಂಕ್ ಸಿನಿಮಾಸ್ ಬ್ಯಾನರ್‍ನ ಮೊದಲ ಸಿನಿಮಾ ಇದು. ಅಜಯ್ ರಾವ್‍ಗೆ ಇದು 25ನೇ ಸಿನಿಮಾ. ಇಬ್ಬರ ಜೋಡಿಯೂ ಈಗಾಗಲೇ ಸತತ 2 ಹಿಟ್ ಚಿತ್ರಗಳನ್ನು ಕೊಟ್ಟಿದೆ. ಮತ್ತೊಂದು ಹಿಟ್ ನಿರೀಕ್ಷೆಯಲ್ಲಿ ಕಾಯುತ್ತಿದೆ.