ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ, ಜನವರಿಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ವರ್ಷದ ಕೊನೆಯಲ್ಲಿ ಯಶ್ ಅಭಿನಯದ ಕೆಜಿಎಫ್ ಬರಲಿದೆ. ಸ್ಸೋ.. ಬೆಳ್ಳಿತೆರೆಯ ಮೇಲೆ ವರ್ಷವಿಡೀ ದೀಪಾವಳಿ ಎಂಬರ್ಥದಲ್ಲಿ ಸುದೀಪ್ ಟ್ವೀಟ್ ಮಾಡಿದ್ದರು.
ಅಂದಹಾಗೆ ಆಯುಧಪೂಜೆಯಲ್ಲಿ ಶುರುವಾದ ಚಿತ್ರರಂಗದ ಹಬ್ಬ.. ದೀಪಾವಳಿ ನಂತರವೂ ಸದ್ದು ಮಾಡುತ್ತಲೇ ಇದೆ. ದಿ ವಿಲನ್ ಸಿನಿಮಾದಿಂದ ಶುರುವಾದ ಸ್ಟಾರ್ ಸಿನಿಮಾಗಳ ಕ್ರೇಜ್ ಹಾಗೆಯೇ ಮುಂದುವರಿಯುತ್ತಿದೆ. ಸುದೀಪ್ ಹಾರೈಕೆ ನಿಜವಾಗಿ ರಿಲೀಸ್ ಆದ ಸಿನಿಮಾಗಳೆಲ್ಲವೂ ಸಕ್ಸಸ್ ಕಾಣಲಿ.
ಅಂದಹಾಗೆ ನಟಸಾರ್ವಭೌಮ ಚಿತ್ರದ ಡಬ್ಬಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಾಗಿ ನಡೆಯುತ್ತಿವೆ.
ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ. ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯರು. ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ನಟಿಸಿರುವ ಸಿನಿಮಾ ನಟಸಾರ್ವಭೌಮ.