ಕೆಜಿಎಫ್... ಬಿಡುಗಡೆಗೆ ಮೊದಲೇ ಒಂದೊಂದೇ ಇತಿಹಾಸ ನಿರ್ಮಿಸುತ್ತಾ ಹೊರಟಿದೆ. ಬಿಡುಗಡೆಯಾಗುವುದು ಡಿಸೆಂಬರ್ ಕೊನೆಯ ವಾರದಲ್ಲಿ. ಟ್ರೇಲರ್ ರಿಲೀಸ್ ಆಗಿ ಒಂದು ವಾರವೂ ಆಗಿಲ್ಲ. ಕ್ರೇಝ್ ಮಾತ್ರ.. ಮೌಂಟ್ ಎವರೆಸ್ಟ್ ಎತ್ತರದಲ್ಲಿ ಬೆಳೆಯುತ್ತಿದೆ.
ಕೆಜಿಎಫ್ ಚಿತ್ರದ ಟ್ರೇಲರ್ ನೋಡಿದವರ ಸಂಖ್ಯೆ 2 ಕೋಟಿ ದಾಟಿದೆ. ಕನ್ನಡದಲ್ಲಿ ಟ್ರೇಲರ್ ನೋಡಿದವರಿಗಿಂತ, ಹಿಂದಿಯ ಟ್ರೇಲರ್ ನೋಡಿದವರ ಸಂಖ್ಯೆಯೇ ಹೆಚ್ಚು. ಕೆಜಿಎಫ್ ಟ್ರೇಲರ್ ನೋಡಿದವರು, ಕನ್ನಡದ ಬಗ್ಗೆ ಗೊತ್ತಿಲ್ಲದೇ ಇರುವವರು ಯಶ್ ಬಗ್ಗೆ ಹುಡುಕಾಡುವುದು ಹೆಚ್ಚಾಗಿದೆ. ಗೂಗಲ್ ಸರ್ಚ್‍ನಲ್ಲಿಯೂ ಯಶ್ ಟಾಪ್ 10ನಲ್ಲಿದ್ದಾರೆ. ಟ್ರೆಂಡಿಂಗ್‍ನಲ್ಲಿಯೂ ಕೆಜಿಎಫ್ ಟಾಪ್‍ನಲ್ಲಿದೆ.
ಕೆಜಿಎಫ್ ಸೃಷ್ಟಿಸುತ್ತಿರುವ ಕ್ರೇಝ್ ನೋಡಿ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಖುಷಿಯಾಗಿದ್ದಾರೆ. ಯಶ್, ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ಎಲ್ಲರೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.