ಡಾ.ರಾಜ್‍ಕುಮಾರ್ ಬಗ್ಗೆ ಭಾರತೀಯ ಚಿತ್ರರಂಗದ ಸೂಪರ್‍ಸ್ಟಾರ್‍ಗಳೆಲ್ಲ ಪ್ರೀತಿ, ಅಭಿಮಾನದಿಂದ ಮಾತನಾಡ್ತಾರೆ. ರಜನಿಕಾಂತ್ ಕೂಡಾ ಅದಕ್ಕೆ ಹೊರತೇನಲ್ಲ. ಇತ್ತೀಚೆಗೆ ರಜನಿ ತಮ್ಮ 2.0 ಸಿನಿಮಾ ಕುರಿತ ಟಿವಿ ಸಂದರ್ಶನದಲ್ಲಿ ಡಾ.ರಾಜ್ ಬಗ್ಗೆ ಮಾತನಾಡಿದ್ದರು. ಅಲ್ಲಿದ್ದ ಪ್ರಶ್ನೆ ಒಂದೇ..
`ನಿಮ್ಮ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಹಾಗೆ.. ನೀವು ಯಾರ ಸಿನಿಮಾಗಾಗಿ ಕಾಯುತ್ತಿದ್ದಿರಿ' ನಿರೂಪಕಿ ಕೇಳಿದ ಈ ಪ್ರಶ್ನೆಗೆ ರಜನಿ ನೀಡಿದ ಉತ್ತರ ಇದು.
`ಡಾ.ರಾಜ್‍ಕುಮಾರ್. ಕನ್ನಡದ ಸೂಪರ್‍ಸ್ಟಾರ್. ಅವರ ಸಿನಿಮಾಗಳಿಗಾಗಿ ನಾನು ಕ್ಯೂ ನಿಲ್ಲುತ್ತಿದ್ದೆ. ನಾವು ಅವರ ದೊಡ್ಡ ಅಭಿಮಾನಿ. ತಮಿಳಿನಲ್ಲಿ ಎಂಜಿಆರ್ ಹೇಗೋ.. ಹಾಗೆ ಕನ್ನಡದಲ್ಲಿ ಡಾ.ರಾಜ್. 10 ಎಂಜಿಆರ್ ಸೇರಿದರೆ ಒಬ್ಬ ಡಾ.ರಾಜ್‍ಗೆ ಸಮ..' ಹೀಗೆ ರಾಜ್ ಗುಣಗಾನ ಮಾಡಿದ್ದಾರೆ ರಜನಿ.
ಇತ್ತೀಚೆಗೆ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದ ವೇಳೆ, ಅಭಿಮಾನಿಗಳ ಉತ್ಸಾಹ, ಎಕ್ಸೈಟ್‍ಮೆಂಟ್ ಕಂಡ ರಜನಿಕಾಂತ್ `ನಿಮ್ಮ ಉತ್ಸಾಹ ನನಗೆ ಅರ್ಥವಾಗುತ್ತೆ. ನಾನೂ ರಾಜ್‍ಕುಮಾರ್ ಅವರನ್ನು ನೋಡಲು ಹೀಗೆಯೇ ಹೋಗುತ್ತಿದ್ದೆ. ಮೊದಲ ಬಾರಿ ಅವರನ್ನು ಕಂಡಾಗ ಕಾಲು ಮುಟ್ಟಿ ನಮಸ್ಕರಿಸಿದ್ದೆ' ಎಂದು ಹೇಳಿದ್ದರು.