` ಎಲ್ಲಿದೆ ವಿಲನ್ ಟೀಂ..? - ಕೇಳಿದ್ದು ಕಿಚ್ಚ ಸುದೀಪ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep looking for the villain's team
Sudeep Looking For The Villain's Team

ದಿ ವಿಲನ್ ಚಿತ್ರತಂಡ ಎಲ್ಲಿದೆ..? ನಾನವರನ್ನು ಹುಡುಕುತ್ತಿದ್ದೇನೆ. ದಯವಿಟ್ಟು ಯಾರಾದರೂ ಸಿಕ್ಕರೆ, ಅವರಿಗೆ ನಾನು ಹುಡುಕುತ್ತಿದ್ದೇನೆ ಎನ್ನುವುದನ್ನು ತಿಳಿಸಿ. ಹೀಗಂತ ಸ್ವತಃ ಹೇಳಿಕೊಂಡಿರೋದು ಕಿಚ್ಚ ಸುದೀಪ್. 

ದಿ ವಿಲನ್ ಸಿನಿಮಾ ರಿಲೀಸ್ ಆಗಿ ಎರಡು ವಾರ ಪೂರೈಸಿದೆ. ಚಿತ್ರಮಂದಿರಗಳ ಸಂಖ್ಯೆ ಬಿಡುಗಡೆಯ ನಂತರ ಹೆಚ್ಚುತ್ತಿದೆ. ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆಯುತ್ತಿದೆ. ಆದರೆ, ಚಿತ್ರದ ಬಗ್ಗೆ ಕನ್ನಡ ಪತ್ರಿಕೆಗಳಲ್ಲಿ ಸಣ್ಣದೊಂದು ಜಾಹೀರಾತು ಕೂಡಾ ಇಲ್ಲ. ಸುದೀಪ್ ಬೇಸರಕ್ಕೆ ಕಾರಣ ಇದೇ..

ಮರಾಠಿ ಪತ್ರಿಕೆಗಳಲ್ಲಿ ದಿ ವಿಲನ್ ಸಿನಿಮಾ ಪ್ರದರ್ಶನದ ಜಾಹೀರಾತುಗಳು ಇರುವುದನ್ನು ಅಭಿಮಾನಿಯೊಬ್ಬರು ಸುದೀಪ್‍ಗೆ ಕಳಿಸಿಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್, ತಮ್ಮ ಬೇಸರವನ್ನು ಈ ರೀತಿ ಹೊರಹಾಕಿದ್ದಾರೆ.

ಈಗ ಉತ್ತರಿಸಬೇಕಾದವರು ನಿರ್ಮಾಪಕ ಸಿ.ಆರ್.ಮನೋಹರ್. ನಿರ್ದೇಶಕ ಜೋಗಿ ಪ್ರೇಮ್. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery