ಎಂಎಲ್‍ಎ. ಒಳ್ಳೆ ಹುಡ್ಗ ಪ್ರಥಮ್ ಅಭಿನಯದ ಸಿನಿಮಾ ತೆರೆಗೆ ಬರುತ್ತಿದೆ. ಎಂಎಲ್‍ಎ ಅಂದ್ರೆ ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ ಅನ್ನೋ ಅರ್ಥ ಇದ್ಯಂತೆ. ಕಾಮಿಡಿ ಕಾಮಿಡಿಯಾಗಿಯೇ ಸಾಗುವ ಕಥೆಯಲ್ಲಿ ಪ್ರಥಮ್ ಇಮೇಜ್‍ಗೆ ತಕ್ಕಂತ ಪಾತ್ರವಿದೆ.
ಮಂಜು ಮೌರ್ಯ ಅವರದ್ದೇ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ. ಸೋನಾಲ್ ಮಾಂಟೆರೋ ಚಿತ್ರದ ನಾಯಕಿ. ಸ್ಪರ್ಶ ರೇಖಾ ಚಿತ್ರದ ಖಳನಾಯಕಿ. ಕುರಿ ಪ್ರತಾಪ್, ನವೀನ್, ಚಂದ್ರಕಲಾ ಮೋಹನ್ ನಟಿಸಿರುವ ಚಿತ್ರಕ್ಕೆ ವೆಂಕಟೇಶ್ ರೆಡ್ಡಿ ನಿರ್ಮಾಪಕ.
ಪ್ರಥಮ್ ನಿಜ ಜೀವನಕ್ಕೂ ಹತ್ತಿರ ಇರುವ ಸಿನಿಮಾದಲ್ಲಿ, ಸಾಮಾನ್ಯನೊಬ್ಬ ಎಂಎಲ್‍ಎ ಆಗುವ, ಸವಾಲು ಗೆಲ್ಲುವ ಕಥೆ ಇದೆ. ಮಾಜಿ ಸಚಿವ ಎಚ್.ಎಂ.ರೇವಣ್ಣ, ಚಿತ್ರದಲ್ಲಿ ಸಿಎಂ ರೇವಣ್ಣ ಆಗಿದ್ದಾರೆ.