` ಡಿಸೆಂಬರ್‍ನಲ್ಲಿ ಯಶ್ V/s ಉಪ್ಪಿ ಫೈಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kgf and i love you to release simultaneously
KGF, I Love You

ಡಿಸೆಂಬರ್ 21ಕ್ಕೆ ಕೆಜಿಎಫ್ ರಿಲೀಸ್ ಆಗುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಅದ್ಧೂರಿ ನಿರ್ಮಾಣದ ಭಾರಿ ಬಜೆಟ್‍ನ ಚಿತ್ರ ಕೆಜಿಎಫ್. 5 ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗ್ತಿರೋ ಕೆಜಿಎಫ್‍ಗೆ ಅದೇ ದಿನ ಉಪ್ಪಿ, ಆರ್.ಚಂದ್ರು ಕಾಂಬಿನೇಷನ್‍ನ ಐ ಲವ್ ಯೂ ಬರಲಿದೆ. ಮೂಲಗಳ ಪ್ರಕಾರ, ಐ ಲವ್ ಯೂ, ಕೆಜಿಎಫ್‍ಗೆ ಎದುರಾಳಿಯಾಗಿ ಬರುವ ಸಾಧ್ಯತೆ ಇದೆ.

2016ರಲ್ಲೂ ಒಮ್ಮೆ ಹೀಗೆಯೇ ಆಗಿತ್ತು. 2016ರ ಅಕ್ಟೋಬರ್‍ನಲ್ಲಿ ಯಶ್‍ರ ಸಂತು ಸ್ಟ್ರೈಟ್ ಫಾರ್ವರ್ಡ್‍ಗೆ ಎದುರಾಗಿ, ಸುದೀಪ್-ಉಪೇಂದ್ರ ಅಭಿನಯದ ಮುಕುಂದ ಮುರಾರಿ ರಿಲೀಸ್ ಆಗಿತ್ತು. ಈ ಬಾರಿ ಕೆಜಿಎಫ್‍ಗೆ ಐ ಲವ್ ಯೂ ಫೈಟ್ ಕೊಡಲಿದೆ.

ಕೆಜಿಎಫ್ ರಿಲೀಸ್‍ಗೆ ಒಂದು ವಾರ ಮೊದಲು ರಿಲೀಸ್ ಮಾಡಿದರೆ ಹೇಗೆ ಎಂಬ ಆಲೋಚನೆಯೂ ಚಿತ್ರತಂಡದಲ್ಲಿದೆ. ಅದು ಕ್ರಿಸ್‍ಮಸ್ ರಜೆ ಸಮಯ. ಹಬ್ಬದ ರಜೆ ಇರುವಾಗ ಎರಡು ದೊಡ್ಡ ಚಿತ್ರಗಳು ರಿಲೀಸ್ ಆಗುವುದು ಒಳ್ಳೆಯದೇ ಎನ್ನುತ್ತಾರೆ ನಿರ್ದೇಶಕ ಚಂದ್ರು. ಡಿಸೆಂಬರ್ ಕೊನೆ ವಾರದಲ್ಲಿ ರಿಲೀಸ್ ಆಗುವ ಚಿತ್ರಗಳು ಸೂಪರ್ ಡ್ಯೂಪರ್ ಹಿಟ್ ಆಗುತ್ತವೆ ಎಂಬ ನಂಬಿಕೆ ಚಿತ್ರರಂಗದಲ್ಲಿದೆ. ನೋಡಬೇಕು.

#

The Terrorist Movie Gallery

Thayige Thakka Maga Movie Gallery