` ಸರ್ಕಾರ್‍ಗೆ ಚೆನ್ನೈಗಿಂತ ಬೆಂಗಳೂರಿನಲ್ಲೇ ಹೆಚ್ಚು ಶೋ - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
sarkar shows in bangalore
Sarkar Shows In Bengaluru

ಮಲ್ಟಿಪ್ಲೆಕ್ಸ್ ಪರಭಾಷಾ ಪ್ರೇಮ : ಸರ್ಕಾರ್‍ಗೆ ಚೆನ್ನೈಗಿಂತ ಬೆಂಗಳೂರಿನಲ್ಲೇ ಹೆಚ್ಚು ಶೋತಮಿಳು ಸ್ಟಾರ್ ವಿಜಯ್ ಅಭಿಯನದ ಸರ್ಕಾರ್ ಚಿತ್ರ ರಿಲೀಸ್ ಆಗಿದೆ. ವಿಶೇಷವೇನು ಗೊತ್ತೇ..? ಸರ್ಕಾರ್‍ಗೆ ಬೆಂಗಳೂರಿನಲ್ಲಿ 80ಕ್ಕೂ ಹೆಚ್ಚು ಸ್ಕ್ರೀನ್ ಸಿಕ್ಕಿವೆ. ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಸೇರಿ 80ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಿದೆ ಸರ್ಕಾರ್.

ಬುಕ್ ಮೈ ಶೋ ಪ್ರಕಾರವೇ ನೋಡೋದಾದರೆ, ಬೆಂಗಳೂರಿನಲ್ಲಿ ಸರ್ಕಾರ್‍ಗೆ ಹಬ್ಬದ ದಿನ 600ಕ್ಕೂ ಹೆಚ್ಚು ಶೋ ಪ್ರದರ್ಶನ ಕಂಡಿದೆ. ಅದಕ್ಕಾಗಿ ಕನ್ನಡದ ಕೆಲವು ಚಿತ್ರಗಳನ್ನು ತೆಗೆದಿಟ್ಟಿವೆ ಎಂದು ಬೇರೆ ಹೇಳಬೇಕಿಲ್ಲ.

ಆದರೆ, ಅದೇ ವೇಳೆ ಚೆನ್ನೈನಲ್ಲಿ ಸರ್ಕಾರ್ ಚಿತ್ರಕ್ಕೆ ಸಿಕ್ಕಿರುವುದು 35 ಚಿತ್ರಮಂದಿರಗಳು ಮಾತ್ರ. ಮಲ್ಟಿಪ್ಲೆಕ್ಸ್‍ಗಳೂ ಸೇರಿ. ಚೆನ್ನೈಗಿಂತಲೂ ಬೆಂಗಳೂರಿನಲ್ಲೇ ಹೆಚ್ಚು ಶೋ ಕಂಡಿರೋ ಸರ್ಕಾರ್ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

Trayambakam Movie Gallery

Rightbanner02_butterfly_inside

Paddehuli Movie Gallery