` ರಾಮನ ಅವತಾರದಲ್ಲಿ ದರ್ಶನ್ ಡಿ53 - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan's d53 movie poster
D5 3

ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಮನ ಅವತಾರದಲ್ಲಿ ಬರುತ್ತಿದ್ದಾರೆ. ಡಿ53 ಚಿತ್ರದ ಪೋಸ್ಟರ್ ನೋಡಿದವರಿಗೆ ಹಾಗೆ ಅನಿಸೋದು ಸುಳ್ಳಲ್ಲ. ಪುಟ್ಟ ಬಾಲಕನ ಕೈ ಹಿಡಿದಿರುವ ದರ್ಶನ್, ದೂರದಲ್ಲಿ ಇಣುಕಿ ನೋಡುತ್ತಿರುವ ರಾವಣ ವೇಷಧಾರಿ.. ಕೆಳಗೊಂದು ಟ್ಯಾಗ್‍ಲೈನ್...

` ಈ ಕೈಗೆ ಶಬರಿಯ ಮುಂದೆ ಸೋಲೋದು ಗೊತ್ತು. ರಾವಣನ ಮುಂದೆ ಗೆಲ್ಲೋದು ಗೊತ್ತು'

ಶಬರಿಯ ಪ್ರೀತಿ, ಭಕ್ತಿಗೆ ಶರಣಾದವನು ಶ್ರೀರಾಮಚಂದ್ರ. ರಾವಣನ ವಿರುದ್ಧ ಯುದ್ಧ ಗೆದ್ದವನೂ ಶ್ರೀರಾಮಚಂದ್ರ. ಹಾಗಾದರೆ, ದರ್ಶನ್ ರಾಮನ ಅವತಾರದಲ್ಲಿ ಬರುತ್ತಿದ್ದಾರಾ..?

ನಿರ್ದೇಶಕ ತರುಣ್ ಸುಧೀರ್, ಚಿತ್ರದ ಕಥೆಯ ಎಳೆಯನ್ನೂ ಹೇಳಿದ್ದಾರೆ ಅಂತಿದ್ದಾರೆ ದರ್ಶನ್. ಸದ್ಯದಲ್ಲೇ ಚಿತ್ರದ ಟೈಟಲ್‍ನ್ನು ಹೇಳುತ್ತೇವೆ ಎಂದಿದ್ದಾರೆ. ಉಮಾಪತಿ ನಿರ್ಮಾಣದ ಸಿನಿಮಾದ ಶೂಟಿಂಗ್ ಶೀಘ್ರದಲ್ಲೇ ಶುರುವಾಗಲಿದೆ.

#

The Terrorist Movie Gallery

Thayige Thakka Maga Movie Gallery